

ಹುಬ್ಬಳ್ಳಿ: ಇಲ್ಲಿಯ ತಾರಿಹಾಳ ಇಂಡಸ್ಟ್ರೀಯಲ್ ಏರಿಯಾದಲ್ಲಿನ ಖೋಡೆ ಇಂಡಸ್ಟ್ರೀಸ್ ವತಿಯಿಂದ ಖೋಡೆಸ್ ಧನರಸ್ ಶುದ್ಧ ಕುಡಿಯುವ ನೀರಿನ ಘಟಕವನ್ನು ಭಾನುವಾರ ಉದ್ಘಾಟಿಸಲಾಯಿತು.
ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಉದ್ಘಾಟಿಸಿದರು. ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ,
ಹು-ಧಾ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಸತೀಶ ಮೆಹರವಾಡೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಆರ್.ಎಚ್., ಮಾಲೀಕರಾದ ನಾರಾಯಣ ಎನ್. ಖೋಡೆ, ರಾಜೇಶ ಎನ್. ಖೋಡೆ, ಎಸ್‌ಎಸ್‌ಕೆ ಸಮಾಜದ ಮಾಜಿ ಧರ್ಮದರ್ಶಿ ನೀಲಕಂಠಸಾ ಜಡಿ, ಎಸ್‌ಎಸ್‌ಕೆ ಬ್ಯಾಂಕಿನ ಚೇರ್ಮನ್ ವಿಠ್ಠಲ ಲದ್ವಾ, ಭಾಸ್ಕರ ಜಿತೂರಿ ಇತರರು ಉಪಸ್ಥಿತರಿದ್ದರು.