

ಪುತ್ತೂರು ಗ್ರಾಮಾಂತರ: ಪ್ರತಿ ಬಾರಿ ಚುನಾವಣೆ ಬಂದಾಗ, ಧಾರ್ಮಿಕ ವೇದಿಕೆಗಳಲ್ಲಿ ಹಿಂದುತ್ವದ ಬಗ್ಗೆ ಮಾತನಾಡುವವರಿಗೆ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು ಎಂಬ ಕನಿಷ್ಠ ಜ್ಞಾನ ಇಲ್ಲದಿರುವುದು ನಕಲಿ ಹಿಂದುತ್ವಕ್ಕೆ ಸಾಕ್ಷಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕೆಯ್ಯೂರು ಗ್ರಾಮದ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ಕಾಂಕ್ರೀಟ್ ರಸ್ತೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಕೆಯ್ಯೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ.ಜಯರಾಮ ರೈ ಮಾತನಾಡಿದರು. ಹಿರಿಯ ಕಾಂಗ್ರೆಸ್ ಮುಖಂಡ ಸಂತೋಷ್ ರೈ ಇಳಂತಾಜೆ, ವಲಯ ಕಾಂಗ್ರೆಸ್ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ಗ್ರಾ.ಪಂ. ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ, ಬಟ್ಯಪ್ಪ ರೈ ದೇರ್ಲ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರೂಪರೇಖಾ ಆಳ್ವ, ರಾಮಣ್ಣ ಪಿಲಿಂಜ, ಸ್ಥಳೀಯ ಮುಖಂಡರಾದ ದಾಮೋದರ್ ಪೂಜಾರಿ ಕೆಂಗುಡೇಲು, ಶೀನಪ್ಪ ರೈ, ಅಶೋಕ್ ರೈ ದೇರ್ಲ, ಉವಾಕಾಂತ್ ಬೈಲಾಡಿ, ಹನೀಫ್ ಕೆ.ಎಂ.ಮಾಡಾವು, ಆದರ್ಶ್ ರೈ ದೇವಿನಗರ, ಲಿಂಗಪ್ಪ ಗೌಡ ಕಣಿಯಾರು, ಬಾಬು ಎರಕ್ಕಲ ಮತ್ತಿತರರಿದ್ದರು.