

ವಿಜಯವಾಣಿ ಸುದ್ದಿಜಾಲ ಗುರುಪುರ
ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ದೇಶ, ಧರ್ಮ ಎರಡು ಕಣ್ಣುಗಳಿದ್ದಂತೆ. ಮೂಲ ಪರಂಪರೆಯ ಆಚರಣೆ ರೂಢಿಸಿಕೊಂಡು ಧರ್ಮ ಬಲಪಡಿಸಬೇಕು. ಈ ನಿಟ್ಟಿನಲ್ಲಿ ಹಿಂದು ಸಂಸ್ಕೃತಿ ಬಗ್ಗೆ ಚಿಕ್ಕ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಶಿಶು ಮಂದಿರ ನಿರ್ಮಿಸಿರುವುದಕ್ಕೆ ಅಭಿನಂದನೆಗಳು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕಾಟಿಪಳ್ಳದ ಅಭ್ಯುದಯ ಭಾರತಿ ಸೇವಾ ಟ್ರಸ್ಟ್, ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಶ್ರೀ ಜಾರಂದಾಯ ಕೇಶವ ಶಿಶುಮಂದಿರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಎಂಆರ್‌ಪಿಎಲ್ 40 ಲಕ್ಷ ರೂ. ಮನಪಾ 22 ಲಕ್ಷ ರೂ., ದಾನಿಗಳಿಂದ 68 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ.
ಶಾಸಕ ಡಾ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮೇಯರ್ ಮನೋಜ್ ಕುಮಾರ್, ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ, ಉದ್ಯಮಿಗಳಾದ ಕುರುಣಾಕರ ಶೆಟ್ಟಿ ಮಧ್ಯಗುತ್ತು, ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು, ಕನ್ಯಾನ ಸದಾಶಿವ ಶೆಟ್ಟಿ, ಎಂಆರ್‌ಪಿಎಲ್‌ನ ಸಂಪತ್ ರೈ, ಅನಿಲ್ ಶೆಟ್ಟಿ ತೇವು ಸೂರಿಂಜೆ, ಜ್ಯೋತಿಷಿ ನಾಗೇಂದ್ರ ಭಾರದ್ವಾಜ್, ಪ್ರದ್ಯುಮ್ನ ರಾವ್ ಶಿಬರೂರು, ಕೇಶವ ಸನಿಲ್, ಪ್ರಕಾಶ್ ಪಿ.ಎಸ್., ಸುಧೀರ್ ಶೆಟ್ಟಿ ಕಣ್ಣೂರು, ಮಹಾಬಲ ಕುಲಾಲ್, ಧರ್ಮೇಂದ್ರ ಗಣೇಶಪುರ, ಅರ್ಜುನ್ ಭಂಡಾರ್ಕರ್, ವಿನೀತ್ ಶೇಟ್ಟಿ ಶಿಬರೂರು, ಜಾರಂದಾಯ ಕೇಶವ ಶಿಶುಮಂದಿರದ ನೂತನ ಕಟ್ಟಡ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಚಂದ್ರಹಾಸ ಶೆಟ್ಟಿಗಾರ, ಸತೀಶ್ ಮುಂಚೂರು, ವಿಕಾಸ್ ಪೈ.ಚಾಂಗ, ಚಂದ್ರಶೇಖರ ಶೆಟ್ಟಿ, ಜಯಕುಮಾರ್, ತಿಲಕ್‌ರಾಜ್ ಕೃಷ್ಣಾಪುರ, ಮಧುಸೂದನ್ ರಾವ್, ಭಾಸ್ಕರ ರಾವ್ ಬಾಳ, ರೇಷ್ಮಾ ಪಿ. ಮತ್ತಿತರರು ಉಪಸ್ಥಿತರಿದ್ದರು.
ಕಾಟಿಪಳ್ಳ ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಜಯ ಪ್ರಕಾಶ್ ಸೂರಿಂಜೆ ಸ್ವಾಗತಿಸಿದರು. ಅಶೋಕ್ ಕೃಷ್ಣಾಪುರ ನಿರೂಪಿಸಿದರು. ಲೋಕನಾಥ ಭಂಡಾರಿ ವಂದಿಸಿದರು.