ವೈಜ್ಞಾನಿಕ ಬೆಲೆ ಸಿಗದೇ ರೈತರಿಗೆ ನಷ್ಟ: ವಿಚಾರವಾದಿ ಸಿದ್ದರಾಜು ಆಲಕೆರೆ ಬೇಸರ

1 (2)
Published on

ಮಂಡ್ಯ: ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೇ ರೈತರು ನಷ್ಟದ ಜತೆಗೆ ಶೋಷಣೆಗೆ ಒಳಗಾಗಿದ್ದಾರೆ ಎಂದು ವಿಚಾರವಾದಿ ಸಿ.ಸಿದ್ದರಾಜು ಆಲಕೆರೆ ವಿಷಾಧಿಸಿದರು.

ತಾಲೂಕಿನ ಆಲಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಆಲಕೆರೆ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ಕಸಬು ಹೊಂದಿರುವ ದೇಶ. ಇದುವರೆಗೂ ರೈತರು ಬೆಳೆಯುವ ಯಾವುದೇ ಬೆಳೆಗೆ ವೈಜ್ಞಾನಿಕ ಬೆಲೆ ನಿರ್ಧರಿಸುವ ನೀತಿಯನ್ನು ಯಾವ ಸರ್ಕಾರವೂ ಮಾಡಿಲ್ಲ. ರೈತರನ್ನು ದೇಶದ ಬೆನ್ನಲುಬು ಎಂದು ಹೇಳುತ್ತಾರೆಯೇ ಹೊರತು ರೈತ ಸಮುದಾಯವನ್ನು ಅಭಿವೃದ್ಧಿ ಮಾಡದೆ ನಿರ್ಲಕ್ಷಿೃಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲವು ವೇಳೆ ಕೃಷಿಯಲ್ಲಿ ಖರ್ಚು ಮಾಡಿದ ಹಣವೂ ವಾಪಸ್ ಬರುವುದಿಲ್ಲ. ಹಾಗಾಗಿ ಕೃಷಿ ಕ್ಷೇತ್ರ ಲಾಭದಾಯಕವಲ್ಲದ ಕಾರಣ ರೈತ ಯುವಕರು ಕೃಷಿ ಚಟುವಟಿಕೆಯಿಂದ ವಿಮುಖರಾಗಿ ನಗರದ ಕಡೆ ವಲಸೆ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಆಲಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ರೇಣುಕಮ್ಮ ಅಧ್ಯಕ್ಷತೆ ವಹಿಸಿದ್ದರು. ಆಲಕೆರೆ ಘಟಕದ ಅಧ್ಯಕ್ಷ ಎನ್.ಎಸ್.ನವೀನ್ ಕುಮಾರ್, ಜಿಲ್ಲಾ ಘಟಕದ ಕಾರ್ಯದರ್ಶಿ ಸತ್ಯಮೂರ್ತಿ, ಹನುಮೇಗೌಡ, ಪ್ರದೀಪ್ ಇತರರಿದ್ದರು. ಇದೇ ವೇಳೆ ರೈತರಿಗೆ ಉಚಿತವಾಗಿ ಭತ್ತದ ಬಿತ್ತನೆ ಬೀಜ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net