ಬಾಲಗೋಕುಲದಿಂದ ಸಮಾಜ ಪರಿವರ್ತನೆ : ರಾಜೇಂದ್ರ ಮವ್ವಾರ್ ಹೇಳಿಕೆ

New Project (6)
Published on

ಬದಿಯಡ್ಕ: ಬಾಲಗೋಕುಲ ಕೇಂದ್ರಗಳು ಸಮಾಜವನ್ನು ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಲಿ. ಸನಾತನ ಸಂಸ್ಕಾರ ಮನೆಯಿಂದಲೇ ಆರಂಭವಾಗಲಿ ಎಂದು ಬಾಲಗೋಕುಲ ಕಾಸರಗೋಡು ಜಿಲ್ಲೆಯ ಕಾರ್ಯದರ್ಶಿ ರಾಜೇಂದ್ರ ಮವ್ವಾರ್ ಹೇಳಿದರು.

ನೀರ್ಚಾಲು ಬೇಳ ಕುಮಾರಮಂಗಲ ಶ್ರೀ ಕುಮಾರಸ್ವಾಮಿ ವಿದ್ಯಾಮಂದಿರದಲ್ಲಿ ಕಾರ್ತಿಕೇಯ ಬಾಲಗೋಕುಲದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಬಾಲಗೋಕುಲವನ್ನು ಹಿರಿಯ ಸ್ವಯಂಸೇವಕ ಬಾಲಕೃಷ್ಣ ಶರ್ಮಾ ಕುಮಾರಮಂಗಲ ಉದ್ಘಾಟಿಸಿದರು. ಸಂಘದ ಭಾಗದಿಂದ ಜಿಲ್ಲಾ ಸೇವಾ ಪ್ರಮುಖ್ ಮಂಜುನಾಥ ಕಾರ್ಲೆ ಕುಟುಂಬ ಪ್ರಭೋದಿನಿ ತರಗತಿ ನಡೆಸಿಕೊಟ್ಟರು. ದಿನೇಶ್ ಬದಿಯಡ್ಕ ಬಾಲಗೋಕುಲ ತರಗತಿ ನಡೆಸಿದರು. ಕೇಶವ ಕುಂಜಾರು ಉಪಸ್ಥಿತರಿದ್ದರು.

ಬಾಲಗೋಕುಲ ನೀರ್ಚಾಲು ಮಂಡಲ ಕಾರ್ಯದರ್ಶಿ ಉಮೇಶ್ ಏಣಿಯರ್ಪು ಅಧ್ಯಕ್ಷತೆ ವಹಿಸಿದ್ದರು. ಬಾಲಗೋಕುಲ ಬದಿಯಡ್ಕ ತಾಲೂಕು ಅಧ್ಯಕ್ಷ ಯೋಗೀಶ್ ಪೊಡಿಪಳ್ಳ, ಬಾಲಗೋಕುಲ ಬದಿಯಡ್ಕ ಮಂಡಲ ಕಾರ್ಯದರ್ಶಿ ರಾಜೇಶ್ ಕಿಳಿಂಗಾರ್, ಕಾರ್ತಿಕೇಯ ಬಾಲಗೋಕುಲ ಸಮಿತಿ ಅಧ್ಯಕ್ಷ ಶಿವಕುಮಾರ ಕುಮಾರಮಂಗಲ ಮತ್ತಿತರರಿದ್ದರು. ನೀರ್ಚಾಲು ಶಿವಾಜಿ ಬಾಲಗೋಕುಲದ ಗಾಯತ್ರಿ ಪ್ರಾರ್ಥನೆ ಹಾಡಿದರು. ಕಾರ್ತಿಕೇಯ ಬಾಲಗೋಕುಲದ ಪ್ರಮುಖ್ ಶರಣ್ ಕುಮಾರ್ ಎಸ್. ವಂದಿಸಿದರು. ಸದಾಶಿವ ಬೇಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net