ಶತಮಾನಗಳ ಅವಿನಾಭಾವ ಸಂಬಂಧ : ಎಂ.ದುಗ್ಗಣ್ಣ ಸಾವಂತ ಹೇಳಿಕೆ

New Project (3)
Published on

ಮೂಲ್ಕಿ: ಮೂಲ್ಕಿ ಅರಸೊತ್ತಿಗೆ ಹಾಗೂ ಕಾಂತು ಸೇವೆಗಾರ ಕುಟುಂಬ ಹಲವು ಶತಮಾನಗಳ ಹಿಂದೆ ಅವಿನಾಭಾವ ಸಂಬಂಧ ಹೊಂದಿದ್ದು ಕಾಂತು ಸೇವೆಗಾರ ಧರ್ಮ ಚಾವಡಿ ನೂತನ ಟ್ರಸ್ಟ್ ಮೂಲಕ ಧಾರ್ಮಿಕ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಲಿ ಎಂದು ಮೂಲ್ಕಿ ಸೀಮೆ ಅರಸ ಎಂ.ದುಗ್ಗಣ್ಣ ಸಾವಂತರು ಹೇಳಿದರು.

ಬಪ್ಪನಾಡು ಬಡಗುಹಿತ್ಲು ಕಾಂತು ಸೇವೆಗಾರ ಧರ್ಮ ಚಾವಡಿಯಲ್ಲಿ ಭಾನುವಾರ ಆಯೋಜಿಸಲಾದ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.

ಶಾಸಕ ಉಮಾನಾಥ ಎ.ಕೋಟ್ಯಾನ್ ಮುಖ್ಯ ಅತಿಥಿಯಾಗಿದ್ದರು. ಶಿವಗಿರಿ ಮಠದ ಮನೋಜ್ ತಂತ್ರಿ ಆಶೀರ್ವಚನ ನೀಡಿದರು. ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಅಧ್ಯಕ್ಷ ವಾಸು ಪೂಜಾರಿ ಕೊಲಕಾಡಿ ಅಧ್ಯಕ್ಷತೆ ವಹಿಸಿದ್ದರು.

ಮೂಲ್ಕಿ ಸೀಮೆಯ ಬಂಕಿ ನಾಯಕರು ಹಳೆಯಂಗಡಿ, ಕೊಲ್ಲೂರು ಗುಡ್ಡೆ ಸಾನ ಅಂತಪ್ಪ ನಾಯಕರು, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಟ್ರಸ್ಟ್ ಗೌರವಾಧ್ಯಕ್ಷ ಅರ್ಚಕ ಮಹೇಶ್ ಶಾಂತಿ, ಮುಂಬೈ ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ ಜೆ.ಸುವರ್ಣ, ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಪತ್ರಕರ್ತ ಲೀಲಾಕ್ಷ ಕರ್ಕೇರ, ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್.ಪೂಜಾರಿ, ಮುಂಬೈ ಉದ್ಯಮಿ ಜಗನ್ನಾಥ್ ಕೋಟ್ಯಾನ್ ಕಟ್ಟದಂಗಡಿ, ಮೋಹನ್‌ದಾಸ್ ಪೂಜಾರಿ ಮುಂಬೈ, ಕಕ್ವ ಕೊಲಕಾಡಿ ಬರ್ಕೆ ಸಾನದ ಮನೆ ವಿಶಾಲ್ ಎಲ್.ಸಾಲ್ಯಾನ್, ಕಾಂತು ಸೇವೆಗಾರ ಕುಟುಂಬದ ಮುಖ್ಯಸ್ಥ ಪ್ರಕಾಶ್ ಸಾಲ್ಯಾನ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಾಸು ಪೂಜಾರಿ ಚಿತ್ರಾಪು ಮತ್ತಿತರರು ಉಪಸ್ಥಿತರಿದ್ದರು. ಭಾಸ್ಕರ್ ಅಮೀನ್ ತೋಕೂರು ಹಾಗೂ ಜನಾರ್ದನ ಬಂಗೇರ ನಿರೂಪಿಸಿದರು.

ಸುಮಾರು 800 ವರ್ಷಗಳ ಇತಿಹಾಸವಿರುವ ಕಾಂತು ಸೇವೆಗಾರ ಕುಟುಂಬ ಶ್ರದ್ಧೆ ಮತ್ತು ಭಕ್ತಿಯ ಪ್ರತೀಕವಾಗಿದ್ದು ಮುಂದಿನ ದಿನಗಳಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಲಿ. ಉಮಾನಾಥ ಎ.ಕೋಟ್ಯಾನ್ ಮೂಲ್ಕಿ-ಮೂಡುಬಿದಿರೆ ಶಾಸಕ https://www.vijayavani.net/green-signal-for-mysore-bangalore-shimoga-and-kambala https://www.vijayavani.net/raid-on-high-tech-gambling-center-six-arrested

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net