

ಹುಬ್ಬಳ್ಳಿ : ಕನ್ನಡ ಭಾಷೆ ಬೆಳೆಸುವಲ್ಲಿ ವೈದ್ಯರ ಪಾತ್ರವೇನು ಎಂಬುವುದನ್ನು ಅರಿಯಬೇಕಿದೆ. ವೈದ್ಯಕೀಯ ಪಠ್ಯ ಆಂಗ್ಲ ಭಾಷೆಯಲ್ಲಿ ಇರುತ್ತದೆ. ಆದರೆ, ರೋಗಿಗಳ ಜೊತೆಗೆ ಸಂರ್ಪಸಲು ನಾವು ಹೆಚ್ಚು ಕನ್ನಡ ಭಾಷೆ ಬಳಸಬೇಕು ಎಂದು ಮನೋರೋಗ ತಜ್ಞೆ ಹಾಗೂ ವೈದ್ಯ ಸಾಹಿತಿ ಡಾ.ಕೆ. ಎಸ್. ಪವಿತ್ರಾ ಹೇಳಿದರು.
ಇಲ್ಲಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್್ಸ) ಕನ್ನಡ ಸಂಘ ಶುಕ್ರವಾರ ಆಯೋಜಿಸಿದ್ದ ಡಿಂಡಿಮ ಕನ್ನಡ ಸಂಸ್ಕೃತಿಯ ಕನ್ನಡ ಹಬ್ಬದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಸಿಬ್ಬಂದಿ ಸದಾ ಕನ್ನಡ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಕನ್ನಡ ಭಾಷೆ ಉಳಿಸುವ ಬೆಳೆಸುವುದು ಕವಿಗಳು ಹಾಗೂ ಸಾಹಿತ್ಯಗಳಿಂದ ಮಾತ್ರ ಸಾಧ್ಯವಿಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ದಿನನಿತ್ಯದ ವಿಷಯವಾಗಬೇಕು ಎಂದು ಸಲಹೆ ನೀಡಿದರು.
ಕನ್ನಡ ಕಥೆ, ಪುಸ್ತಕ, ನೃತ್ಯ ಹಾಗೂ ಕವಿತೆ ಬರೆಯುವವರು ಸಾಕಷ್ಟು ಜನರಿದ್ದಾರೆ. ಆದರೆ ಪ್ರಸ್ತುತವಾಗಿ ಅದನ್ನು ಓದುವವರು, ನೋಡುವರು ಹಾಗೂ ಕೇಳುವವರು ಇಲ್ಲದಿರುವುದು ದುರಾದೃಷ್ಟ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತಿ ಹಾಗೂ ಉಪನ್ಯಾಸಕಿ ದೀಪಾ ಹಿರೇಗುತ್ತಿ ಮಾತನಾಡಿ, ನಿಜವಾದ ಕನ್ನಡಿಗೆ ಜಾತಿವಾದ, ಕೋಮವಾದಿ ಆಗುವುದಿಲ್ಲ. ಭಾವ, ಬಿರುದು, ಅಹಂಕಾರ ಬಿಟ್ಟು ಇರುವುದೇ ಸ್ವಚ್ಛ ಕನ್ನಡವಾಗಿದೆ. ಕನ್ನಡ ಎಂಬುವದು ಸತ್ಯ, ಅನುಭವ, ಪರೋಪಕಾರ, ಅಸ್ಮಿಯತೆ, ಕರಳು, ಕೊರಳಿನ, ಭೌಗೋಳಿಕ ಭಿನ್ನತೆ ಮೀರಿದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ, ಮುಖ್ಯ ಆಡಳಿತಾಧಿಕಾರಿ ರಮೇಶ ಕಳಸದ, ವೈದ್ಯಕೀಯ ಅಧೀಕ್ಷಕ ಡಾ. ಎಸ್. ರಾಜಶಂಕರ್, ಜಾನಕಿ ತೊರವಿ, ವಿಜಯಶ್ರೀ ಬಿ.ಎಚ್. ಹಾಗೂ ಇತರರು ಇದ್ದರು.
ಬಾಕ್ಸ್
ಹಬ್ಬದ ವಾತಾವರಣ
ಕಿಮ್ಸ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಹಬ್ಬದಿಂದಾಗಿ ಎಲ್ಲೆಡೆ ಹಬ್ಬದ ವಾತಾವರಣ ನಿರ್ವಣಗೊಂಡಿತ್ತು. ಕಲಾ ತಂಡಗಳಿಂದ ಭುವನೇಶ್ವರಿ ದೇವಿ ಮೂರ್ತಿಯ ಮೆರವಣಿಗೆ, ಡೊಳ್ಳು ಕುಣಿತ, ನೃತ್ಯಗಳನ್ನು ವಿದ್ಯಾರ್ಥಿಗಳು ಮಾಡಿದರು. ಕಿಮ್್ಸ ಆವರಣದಲ್ಲಿ ಕನ್ನಡ ಧ್ವಜಗಳು ರಾರಾಜಿಸಿದವು. ಕನ್ನಡ ಸಾಹಿತಿಗಳು, ಕವಿಗಳ ಭಾವಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.