

ಮಂಗಳೂರು: ಕೆನರಾ ವಿಕಾಸ್ ಕ್ಲಿನಿಕ್ ಮತ್ತು ಫಿಜಿಯೋಥೆರಪಿ ಕೇಂದ್ರವನ್ನು ಕಾರ್‌ಸ್ಟ್ರೀಟ್‌ನ ಟೆಂಪಲ್ ಸ್ಕ್ವೇರ್‌ನ ವ್ಯಾಸ ಭವನದಲ್ಲಿ ಶನಿವಾರ ಉದ್ಘಾಟಿಸಲಾಯಿತು.
ರಮೇಶ್ ಭಾರತಿ ಹೆಲ್ತ್ ಕೇರ್ ಪ್ರೈವೆಟ್ ಲಿ.ನ ನಿರ್ದೇಶಕ ಡಾ.ಜನಾರ್ದನ ಕಾಮತ್ ನೂತನ ಕೇಂದ್ರವನ್ನು ಉದ್ಘಾಟಿಸಿದರು. ತಾರಾ ಆಸ್ಪತ್ರೆ ಉತ್ತಮ ಸೇವೆ ನೀಡುವ ಮೂಲಕ ಗುರುತಿಸಿಕೊಂಡಿದ್ದು, ಇದರ ಅಂಗಸಂಸ್ಥೆಯಾಗಿ ಫಿಜಿಯೋಥೆರಪಿ ಕೇಂದ್ರ ಸ್ಥಾಪಿಸಲಾಗಿದೆ. ಪದವಿ ಮತ್ತು ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ಉತ್ತಮ ವಾಸ್ತವಿಕ ಅನುಭವ ನೀಡಲಿದೆ ಎಂದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ವಿಕಾಸ್ ಕಾಲೇಜ್ ಆ್ ಫಿಜಿಯೋಥೆರಪಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ನಿರ್ವಹಿಸುವ ಪ್ರಮುಖ ಸಂಸ್ಥೆಯಾಗಿದೆ. ಕೆನರಾ ವಿಕಾಸ್ ಕ್ಲಿನಿಕ್ ಮತ್ತು ಫಿಸಿಯೋಥೆರಪಿ ಕೇಂದ್ರವು ಆಧುನಿಕ ಉಪಕರಣಗಳು ಮತ್ತು ಸೌಲಭ್ಯಗಳನ್ನು ಹೊಂದಿದೆ. ಕಟ್ಟಡದ ನೆಲ ಮಹಡಿಯಲ್ಲಿ ಈ ಕೇಂದ್ರವು ಇರುವುದರಿಂದ ಸೌಲಭ್ಯಗಳನ್ನು ಪಡೆಯಲು ಬಯಸುವ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ.ಶಿವಾನಂದ ಪೈ, ಡಾ.ಸುರೇಂದ್ರ ಕಾಮತ್, ಡಾ.ಪದ್ಮನಾಭ ಕಾಮತ್, ಡಾ.ಅಶ್ವಿನ್ ಕಾಮತ್ ಅತಿಥಿಗಳಾಗಿದ್ದರು.
ಕೆನರಾ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಿಎ ವಾಮನ ಕಾಮತ್, ಪ್ರಮುಖರಾದ ಸುಧಾಕರ ಕಾಮತ್, ಸುನಿಲ್ ಶೆಣೈ, ಅನೂಪ್, ವಿವೇಕ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರ ನಿರ್ಮಾಣಕ್ಕೆ ಸಹಕರಿಸಿದ ಕಂಟ್ರಾಕ್ಟರ್ ಸುನಿಲ್ ಶೆಣೈ, ನಿವೇದಿತಾ ಶೆಣೈ ಹಾಗೂ ಗಾಯತ್ರಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಡಾ.ವೆನಿಸಾ ಸೆರಾವೋ ಕಾರ್ಯಕ್ರಮ ನಿರೂಪಿಸಿದರು.