ಝಳಕಿ ಗ್ರಾಪಂ ಕಚೇರಿ ಉದ್ಘಾಟನೆ ನಾಳೆ

Zalaki -9-1
ಝಳಕಿ ಗ್ರಾಮದ ನೂತನ ಗ್ರಾಪಂ ಕಟ್ಟಡ.
Published on



ಝಳಕಿ: ಗ್ರಾಮದಲ್ಲಿ ನಿರ್ಮಿಸಿರುವ ಗ್ರಾಪಂ ಕಾರ್ಯಲಯ ಉದ್ಘಾಟನೆಯನ್ನು ಮಾ. 11ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ವಿವಿಧ ಯೋಜನೆಯಡಿ ಅನುದಾನ ಬಳಕೆ ಮಾಡಿಕೊಂಡು 96.59 ಲಕ್ಷ ರೂ.ವೆಚ್ಚದಲ್ಲಿ ಗ್ರಾಪಂ ಕಟ್ಟಡ ನಿರ್ಮಿಸಲಾಗಿದೆ. ಉದ್ಘಾಟನೆ ಸಮಾರಂಭದಲ್ಲಿ ತದ್ದೇವಾಡಿ ಮಹಾಂತೇಶ ಶಾಸ್ತ್ರಿಗಳು ಸಾನ್ನಿಧ್ಯ ವಹಿಸುವರು.

ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷ ಸಣ್ಣಪ್ಪ ತಳವಾರ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಪ್ರಕಾಶ ರಾಠೋಡ, ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ಸಂಸದ ರಮೇಶ ಜಿಗಜಿಣಗಿ ಇತರರು ಪಾಲ್ಗೊಳ್ಳುವರು ಎಂದು ಪಿಡಿಒ ಜಬ್ಬರಲಿ ಹಳ್ಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net