ಮುಧೋಳಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಉದ್ಘಾಟನೆ

Mudhol, Inner wheel Club
ಮುಧೋಳಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಉದ್ಘಾಟನೆ ಮಾಡಲಾಯಿತು. ಡಾ.ಆಶಾ ಮಲಘಾಣ, ಡಾ.ಸರೋಜಾ ಚಿಪ್ಪಲಕಟ್ಟಿ, ಭಾರತಿ ಪೂಜಾರಿ, ಮನೀಶಾ ಶೆಟ್ಟಿ ಇತರರಿದ್ದರು.
Published on

ಮುಧೋಳ: ಸ್ನೇಹ ಮತ್ತು ಸೇವೆಯ ಧ್ಯೇಯವನ್ನಿಟ್ಟುಕೊಂಡು ಅಂತಾರಾಷ್ಟ್ರೀಯಮಟ್ಟದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ ಎಂದು ನೂತನ ಮುಧೋಳ ತಾಲೂಕು ಇನ್ನರ್‌ವ್ಹೀಲ್ ಘಟಕದ ತಾಲೂಕು ಅಧ್ಯಕ್ಷ ಡಾ. ಆಶಾ ಮಲಘಾಣ ಹೇಳಿದರು.

ಪಟ್ಟಣದ ಬಸವ ನಗರದ ಸ್ವಾಮಿ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆ ಇನ್ನರ್ ವ್ಹೀಲ್ ಕ್ಲಬ್‌ನ ಮುಧೋಳ ತಾಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

ವಿಶ್ವದ 108 ದೇಶಗಳಲ್ಲಿ ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಹೆಸರಾದ ಈ ಸಂಸ್ಥೆಗೆ ಈಗ ಶತಮಾನೋತ್ಸವದ ಸಂಭ್ರಮ. ಇಂತಹ ಸಂಭ್ರಮದಲ್ಲಿ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ಖುಷಿ ತಂದಿದೆ. ಬಡವರ, ಮಹಿಳೆಯರ ಶಿಕ್ಷಣ, ಕಲೆ, ಕ್ರೀಡೆ, ಸಾಮಾಜಿಕ ಸೇವೆ ಜತೆಗೆ ಬಡತನದಿಂದ ಶಿಕ್ಷಣ ವಂಚಿತರಾಗುವ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡುವ ಗುರಿ ನಮ್ಮದಾಗಿದೆ ಎಂದರು ತಿಳಿಸಿದರು.

ಡಾ.ಸರೋಜಾ ಚಿಪ್ಪಲಕಟ್ಟಿ ಮಾತನಾಡಿ, ಸಾಮಾಜಿಕ ಸೇವೆ ಮಾಡುವ ಇಚ್ಛೆಯುಳ್ಳ ಮಹಿಳೆಯರು ಕ್ಲಬ್‌ನ ಸದಸ್ಯತ್ವ ಪಡೆಯಲು ಮುಕ್ತ ಅವಕಾಶವಿದೆ. ಪ್ರತಿ ವರ್ಷ ಪದಾಧಿಕಾರಿಗಳನ್ನು ಬದಲಾಯಿಸಲಾಗುವುದು. ಸಾಮಾಜಿಕ ಜೀವನಕ್ಕೆ ಸಂಘಟನೆ ಅತ್ಯಗತ್ಯ ಎಂದರು.

ಕಾರ್ಯದರ್ಶಿ ಭಾರತಿ ಪೂಜಾರಿ, ನೂತನ ಎಡಿಟರ್ ಮನೀಶಾ ಶೆಟ್ಟಿ, ಖಜಾಂಚಿ ಸುಜಾತಾ ವಸದ, ಐಎಸ್‌ಒ ಮಹಾಲಕ್ಷ್ಮೀ ಅಂತಾಪುರ ಸೇರಿ ಮತ್ತಿತರ ಕ್ಲಬ್ ಸದಸ್ಯರಿಗೆ ಬ್ಯಾಡ್ಜ್ ವಿತರಿಸಲಾಯಿತು. ನಿಕಟಪೂರ್ವ ಅಧ್ಯಕ್ಷೆ ಅಂಜನಾ ಶಹಾ, ಕಾರ್ಯದರ್ಶಿ ಆಶಾ ಹಳ್ಳದ ಇತರರಿದ್ದರು.
ಇದೇ ವೇಳೆ ಇಲ್ಲಿನ ಸಾರ್ವಜನಿಕ ರಸ್ತೆ ಬದಿ ಸಸಿಗಳನ್ನು ನೆಡಲಾಯಿತು.

ಮುಧೋಳಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಉದ್ಘಾಟನೆ ಮಾಡಲಾಯಿತು. ಡಾ.ಆಶಾ ಮಲಘಾಣ, ಡಾ.ಸರೋಜಾ ಚಿಪ್ಪಲಕಟ್ಟಿ, ಭಾರತಿ ಪೂಜಾರಿ, ಮನೀಶಾ ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net