ನರಗುಂದದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭ

Inauguration of Indira Canteen in Naragunda
Published on

ನರಗುಂದ: ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆ ಆವರಣದಲ್ಲಿನ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿದ್ದು, ಬಡವರು, ಕಾರ್ವಿುಕರು ಕಡಿಮೆ ಬೆಲೆಗೆ ರುಚಿಕಟ್ಟಾದ ಅಲ್ಪೋಪಹಾರ ಸವಿಯಬಹುದಾಗಿದೆ.

ಇಂದಿರಾ ಕ್ಯಾಂಟೀನ್ ಅನ್ನು ಪಟ್ಟಣದ ತಾಲೂಕಾಸ್ಪತ್ರೆ ಆವರಣದಲ್ಲಿ 2017-18ರಲ್ಲಿ ನಿರ್ವಿುಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಮಟ್ಟದಲ್ಲಿ ಶಾಸಕರ ಬದಲಾವಣೆಗಳಿಂದ ಕ್ಯಾಂಟೀನ್ ಉದ್ಘಾಟನೆ ಆಗಿರರಲಿಲ್ಲ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದ ನಂತರ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಯಿತು. ಆದರೆ, ಪಟ್ಟಣದ ಕ್ಯಾಂಟೀನ್ ಮಾತ್ರ ಸಂಪೂರ್ಣ ಧೂಳು ಹಿಡಿದಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ ಸರ್ಕಾರ ಮತ್ತು ಸ್ಥಳೀಯ ಪುರಸಭೆ ಅಧಿಕಾರಿಗಳು ಕ್ಯಾಂಟೀನ್​ಗೆ ಮೂಲಸೌಕರ್ಯ ಒದಗಿಸಿ ಈಗ ಉದ್ಘಾಟನೆ ಮಾಡಿದ್ದಾರೆ.

ಏನೇನು ಸಿಗಲಿದೆ: ಇಂದಿರಾ ಕ್ಯಾಂಟೀನ್​ನಲ್ಲಿ ಬೆಳಗ್ಗೆ 7 ರಿಂದ 9 ರವರೆಗೆ 10 ರೂ.ಗೆ 6 ಇಡ್ಲಿ, ಚಟ್ನಿ, ಸಾಂಬಾರ್ ಅಥವಾ ಶಿರಾ-ಉಪ್ಪಿಟ್ಟು, ಪಲಾವ್ ಮುಂತಾದ ಅಲ್ಪೋಪಹಾರ ದೊರೆಯಲಿದೆ. ಮಧ್ಯಾಹ್ನ 1 ರಿಂದ 3ರವರೆಗೆ, ರಾತ್ರಿ 7 ರಿಂದ 9ರವರೆಗೆ 20 ರೂ.ಗೆ ಎರಡು ಚಪಾತಿ ಅಥವಾ ಜೋಳದ ರೊಟ್ಟಿ, ಮೊಸರನ್ನ, ಎರಡು ತರದ ಪಲ್ಯೆ, ಅನ್ನ-ಸಾಂಬಾರು ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net