ಗುಳಗಂದಿಯಲ್ಲಿ ಆರೋಗ್ಯ ಮೇಳ ಉದ್ಘಾಟನೆ

Free health checkup camp at Thoravi on 27th
Published on

ಮೆಣಸಗಿ: ಸಮೀಪದ ಗುಳಗಂದಿ ಗ್ರಾಮದ ಸರ್ಕಾರಿ ಹಮ್ಮಿಕೊಂಡಿದ್ದ ಆರೋಗ್ಯ ಮೇಳವನ್ನು ಅಡಿವೆವ್ವ ತಳವಾರ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು. ಡಾ. ವಿಜಯ್ ದತ್ತ ಮನಸೂಳಿ ಮಾತನಾಡಿ, ನಿಸರ್ಗದಲ್ಲಿನ ಬದಲಾವಣೆಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ದೇಹದಲ್ಲಿ ಅನಗತ್ಯ ಅಂಶಗಳನ್ನು ಆಯುರ್ವೇದದ ಪಂಚಕರ್ಮ ಚಿಕಿತ್ಸಾ ಪದ್ಧತಿಯಿಂದ ಹೊರ ಹಾಕಬಹುದು ಎಂದು ಹೇಳಿದರು. ಆಶಾ ಕಾರ್ಯಕರ್ತರಾದ ಸುವರ್ಣ ನೀಲಗುಂದ, ರೇಣುಕಾ ಬೆಳ್ಳಟ್ಟಿ, ನಿರ್ಮಲ ಗೋಲಗೌಡ್ರ, ರೂಪಾ ಕುಲಕರ್ಣಿ, ಗೋವಿಂದಪ್ಪ ರಿತ್ತಿ, ರೇಣುಕಾ ಉಳ್ಳಿ, ಸುಜಾತಾ ಮಾದರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net