

ನಗರದ ಲಕ್ಷ್ಮೀಪುರಂನ ಸಿದ್ದಪ್ಪ ಚೌಕದ ವಾಣಿ ವಿಲಾಸ್ ರಸ್ತೆಯಲ್ಲಿ ಹರಿ ಗೋವಿಂದಾಸ್ ಹೋಟೆಲ್ ಹಾಗೂ ರೆಸ್ಟೋರೆಂಟ್ ಶುಕ್ರವಾರ ಉದ್ಘಾಟನೆಗೊಂಡಿತು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿ ಶುಭ ಹಾರೈಸಿದರು. ಶಾಸಕರಾದ ಜಿ.ಡಿ.ಹರೀಶ್‌ಗೌಡ, ಶ್ರೀವತ್ಸ, ರಮೇಶ ಬಂಡಿಸಿದ್ದೇಗೌಡ, ಹರೀಶ್‌ಗೌಡ, ರವಿಕುಮಾರ್ ಗಣಿಗ, ಮಾಜಿ ಸಚಿವ ಸಾ.ರಾ.ಮಹೇಶ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಹೋಟೆಲ್ ಮಾಲೀಕ ಪಿ.ಬಿ.ಕರೀಗೌಡ ಇತರರಿದ್ದರು.