

ಮಡಿಕೇರಿ: ಬಾಲಂಬಿ ಹನುಮಾನ್ ಯುವಕ ಮಂಡಲ ಇದರ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಆನ್ಯಾಳದ ಧ್ವಾಕ್ರ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅಜಿಲ ಯಾನೆ ನಲಿಕೆ ಸಮಿತಿಯ ಮಾಜಿ ಅಧ್ಯಕ್ಷ ಕೆ.ಕೆ.ಬಾಲಕೃಷ್ಣ ಅವರು ಉದ್ಘಾಟಿಸಿದರು. ಅಜಿಲ ಯಾನೆ ನಲಿಕೆ ಸಮಿತಿಯ ಅಧ್ಯಕ್ಷ ಕೆ.ಕೆ.ದೇವಪ್ಪ ಅಧ್ಯಕ್ಷತೆ ವಹಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ದಬ್ಬಡ್ಕ ಕಾಂತುಬೈಲ್ ಶ್ರೀರಾಮ ಯುವಕ ಮಂಡಲದ ಸ್ಥಾಪಕ ಬಿ.ಎಸ್.ಪ್ರಜ್ವಲ್ ಅವರು ಯುವಕ ಮಂಡಲದ ಆಗು ಹೋಗುಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ೨೦೨೪-೨೫ರ ಅವಧಿಗೆ ನೂತನ ಅಧ್ಯಕರಾಗಿ ಸತೀಶ್.ಎ.ಸಿ.ಆನ್ಯಾಳ ಇವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಕೌಶಿಕ್ ಆನ್ಯಾಳ, ಕೋಶಧಿಕಾರಿಯಾಗಿ ಅಶ್ವಿನ್ ಕೊಯನಾಡು, ಹಿರಿಯ ಸಲಹೆಗರರಾಗಿ ಕೆ.ಕೆ.ದೇವಪ್ಪ ಮತ್ತು ಕೆ.ಬಿ.ಚಂದಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಅಜಿಲ ಯಾನೆ ನಲಿಕೆ ಸಮಿತಿಯ ಉಪಾಧ್ಯಕ್ಷರಾದ ಬಿ.ಚಂದಪ್ಪ, ಸದಸ್ಯರಾದ ಕುಮಾರ್ ಕಲ್ಲುಗುಂಡಿ, ಕೆ.ಕೆ.ಶಿವಪ್ಪ, ಬಿ.ಕೃಷ್ಣಪ್ಪ ಉಪಸ್ಥಿತರಿದ್ದರು.