

ಹುಮನಾಬಾದ್: ಜೀವನದಲ್ಲಿ ಸಾಧನೆಗೈಯಲು ಗುರುವಿನ ಮಾರ್ಗದರ್ಶನ ಅತ್ಯಂತ ಅವಶಕ್ಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹೇಳಿದರು.
ಗಡವಂತಿ ಗ್ರಾಮದಲ್ಲಿ ಗೆಳೆಯರ ಬಳಗದಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ತಾಲೂಕಿನ ಪತ್ರಕರ್ತರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗುರುವಿನ ಸ್ಥಾನ ಅತ್ಯಂತ ಪವಿತ್ರವಾಗಿದೆ. ತಮಗೆ ಶಿಕ್ಷಣ ನೀಡಿದ ಗುರುಗಳಿಗೆ ಸ್ಮರಿಸಿ ಸತ್ಕಾರ ಮಾಡುತ್ತಿರುವುದು ಅತ್ಯಂತ ಮಹತ್ವದಾಗಿದೆ. ಅಲ್ಲದೆ ತಮ್ಮ ಸುದ್ದಿಗಳ ಮೂಲಕ ಸಮಾಜ ಪರ ಕಾರ್ಯ ಮಾಡುತ್ತಿರುವ ಪತ್ರಕರ್ತರಿಗೂ ಸನ್ಮಾನಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಶಿವಾನಂದ ಮಂಠಾಳಕರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ, ಮಲ್ಲಿಕಾರ್ಜುನ ಕುಂಬಾರ ಮಾತನಾಡಿದರು.
ಶಿಕ್ಷಕರಾದ ಬಂಡೆಪ್ಪ ಖೂಬಾ, ಬಾಬುರಾವ ಜನ್ನಾ, ಬಸವಂತರಾವ ವಿಭೂತಿ, ಪುಂಡಲಿಕರಾವ, ರಮೇಶ ಇಜಾರೆ, ಶಶಿಕಾಂತ ಗಂಗಸಿರಿ, ವಿಠಲ್‌ರಾವ ಸಬಕಾಳೆ, ಸಿದ್ದಪ್ಪ ಹೆಗ್ಗಣಿ, ಮಡೆಪ್ಪ ಕುಂಬಾರ ಹಾಗೂ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯ ಕಾರ್ಯಕಾರಣಿ ಸದಸ್ಯ ಅಭಿಮನ್ಯು ನಿರಗುಡಿ, ತಾಪಂ ಮಾಜಿ ಸದಸ್ಯ ಕೆ.ಎಂ.ಗಜೇಂದ್ರ, ಉದ್ಯಮಿ ಸಂತೋಷ ಪಾಟೀಲï, ಪಕ್ಷದ ಮಂಡಲ ಅಧ್ಯಕ್ಷ ಅನಿಲ ಪಸರ್ಗಿ, ಪ್ರಮುಖರಾದ ರವಿ ಹೊಸಳ್ಳಿ, ಅಶೋಕ ವಿಭೂತಿ, ಮಲ್ಲಿಕಾರ್ಜುನ ಕಿಟ್ಟ ಇತರರಿದ್ದರು.