

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಂದು ಮಗು ಡೆಸ್ಕ್ ಹಾಗೂ ಅತ್ಯುನ್ನತ ಸೌಕರ್ಯ ಹೊಂದಿದ ಕೊಠಡಿಗಳಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವುದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಕನಸು. ಈ ಕನಸು ನನಸು ಮಾಡಲು ಇಂತಹ ಯೋಜನೆಗಳು ಅಗತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಹೊಸಯಲ್ಲಾಪುರ ಕಾಮನಕಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೊಠಡಿಗಳ ಲೋಕಾರ್ಪಣೆ ಹಾಗೂ ಡೆಸ್ಕ್ಗಳ ವಿತರಣೆ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಶಾಲೆಗಳ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಪ್ರಯತ್ನ ನಡೆಸಲಾಗುವುದು. ಕ್ಲಾಸ್ಗಳಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಕೆ ಜತೆಗೆ ಅಗತ್ಯ ಮೂಲ ಸೌಕರ್ಯ ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ಕೋಲ್ ಇಂಡಿಯಾ ಲಿಮಿಟೆಡ್ ಸಿಎಸ್ಆರ್ನ 1.1 ಕೋಟಿ ರೂ. ಅನುದಾನದಲ್ಲಿ 8 ಶಾಲೆ ಕೊಠಡಿಗಳ ನಿರ್ಮಾಣ ಹಾಗೂ ಡೆಸ್ಕ್ಗಳನ್ನು ವಿತರಿಸಲಾಗಿದೆ. ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ಶಂಕರ ಶೇಳಕೆ, ಮುಖಂಡರಾದ ಸುನೀಲ ಮೋರೆ, ಸವಿತಾ ಅಮರಶೆಟ್ಟಿ, ಸ್ಥಳಿಯರು, ಗ್ರಾಮದ ಹಿರಿಯರು, ಇತರರು ಇದ್ದರು.