ಉನ್ನತ ವಿದ್ಯಾಭ್ಯಾಸಕ್ಕೆ ವಿಶೇಷ ಪ್ಯಾಕೇಜ್ : ಸಚಿವೆ ಡಾ.ಆರ್.ಬಿಂದು ಭರವಸೆ :

Museum
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನವೀಕೃತ ಭೂವಿಜ್ಞಾನ ವಸ್ತು ಸಂಗ್ರಹಾಲಯವನ್ನು ಸಚಿವೆ ಡಾ.ಆರ್.ಬಿಂದು ಉದ್ಘಾಟಿಸಿದರು. ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎ.ಎನ್.ಸುಂದರ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಆಸಿಫ್ ಇಕ್ಬಾಲ್ ಕಾಕಶ್ಶೇರಿ ಇದ್ದರು.
Published on

ಕಾಸರಗೋಡು: ಜಿಲ್ಲೆಯಲ್ಲಿ ವಿವಿಧ ಕೋರ್ಸ್‌ಗಳನ್ನು ಒದಗಿಸುವ ಮೂಲಕ ಉನ್ನತ ಶಿಕ್ಷಣಕ್ಕಾಗಿ ಇತರ ಜಿಲ್ಲೆಗಳ ಅವಲಂಬನೆ ತಪ್ಪಿಸಲಾಗುವುದು. ಜಿಲ್ಲೆಯ ಉನ್ನತ ಶಿಕ್ಷಣ ಕ್ಷೇತ್ರ ಸಶಕ್ತೀಕರಣಗೊಳಿಸಲು ವಿಶೇಷ ಪ್ಯಾಕೇಜ್ ಮಂಜೂರು ಮಾಡಲಾಗುವುದು ಎಂದು ಉನ್ನತ ಶಿಕ್ಷಣ, ಸಾಮಾಜಿಕ ನ್ಯಾಯ ಸಚಿವೆ ಡಾ.ಆರ್.ಬಿಂದು ತಿಳಿಸಿದರು.

ವಿದ್ಯಾನಗರದಲ್ಲಿರುವ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ, ಭೂವಿಜ್ಞಾನ ನವೀಕೃತ ವಸ್ತುಸಂಗ್ರಹಾಲಯ ಹಾಗೂ ರಾಕ್ ಗಾರ್ಡನ್ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಎನ್ನೆಸ್ಸೆಸ್ ಸ್ವಯಂಸೇವಕರು ಎಂಡೋ ಸಂತ್ರಸ್ತರಿಗೆ ಒದಗಿಸಲಿರುವ ಕಿಯೋಸ್ಕ್‌ಗಳ ಕೀಲಿಕೈಗಳನ್ನು ಹಸ್ತಾಂತರಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಜಿಐಎಸ್ ಲ್ಯಾಬ್‌ನ ಕಾರ್ಯಾಚರಣೆ ಪ್ರಾರಂಭಿಸಲು ಹಳೇ ವಿದ್ಯಾರ್ಥಿಯೂ ಆಗಿರುವ ಶಾಸಕರು ತಮ್ಮ ಆಸ್ತಿ ಅಭಿವೃದ್ಧಿ ನಿಧಿಯಿಂದ 25 ಲಕ್ಷ ರೂ. ಮಂಜೂರುಗೊಳಿಸುವುದಾಗಿ ಘೋಷಿಸಿದರು. ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ಉದುಮ ಶಾಸಕ ಸಿ.ಎಚ್.ಕುಞಂಬು ಮುಖ್ಯ ಅತಿಥಿಯಾಗಿದ್ದರು.

ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎ.ಎನ್.ಸುಂದರ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಆಸಿಫ್ ಇಕ್ಬಾಲ್ ಕಾಕಶ್ಶೇರಿ, ಸಿ.ಕೆ ಆಶಲತಾ, ವಿ.ವಿ.ವಿಷ್ಣು, ಸಾಮಾಜಿಕ ನ್ಯಾಯ ಇಲಾಖೆ ಜಿಲ್ಲಾ ಅಧಿಕಾರಿ ಆರ್ಯ ಪಿ.ರಾಜ್, ಪಿಡಬ್ಲ್ಯೂಡಿ ಕಾರ್ಯಪಾಲಕ ಇಂಜಿನಿಯರ್ ಎಂ.ಸಜಿತ್, ಪಿಟಿಎ ಉಪಾಧ್ಯಕ್ಷ ಎ.ಪ್ರೇಮಜಿತ್, ಜಿಯೋ ಅಲ್ಯೂಮ್ನಿ ಅಧ್ಯಕ್ಷ ಪ್ರೊ.ವಿ.ಗೋಪಿನಾಥನ್, ಹಿರಿಯ ಅಧೀಕ್ಷಕ ಎ. ರವೀಂದ್ರನಾಥ ರೈ ಭಾಗವಹಿಸಿದ್ದರು.

ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಎಸ್.ಅನಿಲಕುಮಾರ್ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ. ಪಿ.ವಿ. ಮಿನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net