ಗೌತಮೇಶ್ವರ ದೇಗುಲ ಉದ್ಘಾಟನೆ

ald temple
ತೋರಣಮಾವು ಗ್ರಾಮದಲ್ಲಿ ಶಿಲೆಯಿಂದ ನಿರ್ಮಿಸಿರುವ ಗೌತಮೇಶ್ವರ ದೇವಸ್ಥಾನ.
Published on

ಆಲ್ದೂರು: ತೋರಣಮಾವು ಗ್ರಾಮ ಸಮೀಪ ಇತಿಹಾಸ ಪ್ರಸಿದ್ಧ ಗೌತಮೇಶ್ವರ ದೇವಸ್ಥಾನವನ್ನು ಗ್ರಾಮಸ್ಥರು ಹಾಗೂ ಪುರಾತತ್ವ ಇಲಾಖೆಯಿಂದ ಜೀರ್ಣೋದ್ಧಾರಗೊಳಿಸಿದ್ದು, ಬುಧವಾರ ಉದ್ಘಾಟಿಸಲಾಯಿತು.

ಮಂಗಳವಾರ ದೇವರಿಗೆ ವಾಸ್ತು ರಾಕ್ಷೊಘ್ನ ಹೋಮ, ಸುದರ್ಶನ ಹೋಮ ಜರುಗಿದ್ದು, ಬುಧವಾರ ಬೆಳಗ್ಗೆ ಕಲಾ ಹೋಮ,ನವಗ್ರಹ ಹೋಮ, ರುದ್ರ ಹೋಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ ಭಟ್ ನೇತೃತ್ವದಲ್ಲಿ ನೆರವೇರಿಸಲಾಯಿತು. ಶಾಸಕಿ ನಯನಾ ಮೋಟಮ್ಮ ದೇವರ ದರ್ಶನ ಪಡೆದರು. ದೇವಸ್ಥಾನಕ್ಕೆ ಕಚ್ಚಾ ರಸ್ತೆ ಇರುವುದರಿಂದ ಭಕ್ತರಿಗೆ ಅನನುಕೂಲವಾಗಿದೆ. ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗುತ್ತದೆ. ರಸ್ತೆ ಡಾಂಬರೀಕರಣಗೊಳಿಸಿಕೊಡುವಂತೆ ಶಾಸಕಿ ನಯನಾ ಮೋಟಮ್ಮ ಅವರಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಸುರೇಶ್ ಮನವಿ ಮಾಡಿದರು.
ಮಹಾಶಿವರಾತ್ರಿ ಪ್ರಯುಕ್ತ ಮಾ.8ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನದಾನ ನಡೆಯಲಿದೆ ಎಂದು ಅರ್ಚಕ ವಿಶ್ವನಾಥ ಭಟ್ ತಿಳಿಸಿದರು.
ದೇವಸ್ಥಾನ ಸಮಿತಿ ಕಾರ್ಯದರ್ಶಿ ಮನೋಹರ್, ಸುಬ್ಬಣ್ಣ, ಸುರೇಶ್, ಶ್ರೀಧರ್, ಶಶಿ, ನಾರಾಯಣ, ಕೇಶವಮೂರ್ತಿ, ಗ್ರಾಮದ ಹಾಗೂ ಸುತ್ತಮುತ್ತಲಿನ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net