

ಕುಶಾಲನಗರ: ಕುಶಾಲನಗರ ರೋಟರಿ ಸಂಸ್ಥೆಗೆ ರೋಟರಿ ಜಿಲ್ಲಾ 3181ರ ಪ್ರಾಂತಪಾಲ ಎಚ್.ಆರ್. ಕೇಶವ ಅಧಿಕೃತ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರೋಟರಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರಾದ ಸುನೀತಾ ಲೋಕೇಶ್, ಉ.ರಾ.ನಾಗೇಶ್, ಬಿ.ಟಿ.ಪೂರ್ಣೇಶ್ ಅವರನ್ನು ಸನ್ಮಾನಿಸಲಾಯಿತು.
ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಪಟ್ಟಣದ ಕಾವೇರಿ ಬಡಾವಣೆಯ ಉದ್ಯಾನದಲ್ಲಿ ಅಳವಡಿಸಿದ್ದ ಹೊರಾಂಗಣ ವ್ಯಾಯಾಮ ಉಪಕರಣಗಳನ್ನು ಬುಧವಾರ ಉದ್ಘಾಟಿಸಿ ಪುರಸಭೆಗೆ ಹಸ್ತಾಂತರ ಮಾಡಲಾಯಿತು.
ಮಾದಾಪಟ್ಟಣ ಗ್ರಾಮದ ಅಂಗನವಾಡಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಆಟಿಕೆ ಸಾಮಗ್ರಿ, ಜಮಖಾನ, ವಾಟರ್ ಫಿಲ್ಟರ್ ಸೇರಿದಂತೆ ವಿವಿಧ ಶೈಕ್ಷಣಿಕ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ರೋಟರಿ ಅಧ್ಯಕ್ಷೆ ಸುನೀತಾ ಮಹೇಶ್, ಸಹಾಯಕ ಪ್ರಾಂತಪಾಲ ಎಂ.ಡಿ.ಲಿಖಿತ್, ಜೋನಲ್ ಲೆಫ್ಟಿನೆಂಟ್ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಶಿರ್ಲಿ ಸಂತೋಷ್, ರೋಟರಿ ಪದಾಧಿಕಾರಿಗಳಾದ ಮಹೇಶ್ ಕುಮಾರ್ ನಲ್ವಾಡೆ, ಹರಿ.ಎ. ಶೆಟ್ಟಿ, ಆರತಿ ಶೆಟ್ಟಿ, ಎಸ್.ಕೆ.ಸತೀಶ್, ಶೋಭಾ ಸತೀಶ್, ಎಂ.ಡಿ.ರಂಗಸ್ವಾಮಿ, ರವೀಂದ್ರ.ವಿ.ರೈ ಇತರರು ಇದ್ದರು.