ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ

railway
Published on

ಉಡುಪಿ: ಇಂದ್ರಾಳಿ ರೈಲು ನಿಲ್ದಾಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಯುತ್ತಿದ್ದು, 2 ಕಡೆಗಳಲ್ಲಿ ಪ್ಲಾಟ್ ​ಪಾಮ್‌ ನಿರ್ಮಾಣಕ್ಕೆ 9 ಕೋಟಿ ರೂ. ಅಗತ್ಯವಿದೆ ಎಂದು ಕೊಂಕಣ ರೈಲ್ವೆ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ್​ ಕುಮಾರ್​ ಝಾ ಹೇಳಿದರು.

ಇಂದ್ರಾಳಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಎಕ್ಸಿಕ್ಯೂಟಿವ್​ ಲಾಂಜ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಆರ್ಥಿಕ ವರ್ಷದಲ್ಲಿ ಕೊಂಕಣ ರೈಲ್ವೇ 301 ಕೋಟಿ ರೂ. ಲಾಭ ಗಳಿಸಿದ್ದು, 1200 ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ಟ್ರಾ$್ಯಕ್​, ್ಲಾಟ್​ಾಮ್​ರ್ ಅಭಿವೃದ್ಧಿ ಸಹಿತಿ ವಿವಿಧ ಕಾಮಗಾರಿಗಳಿಗೆ ಟೆಂಡರ್​ ಪ್ರಕ್ರಿಯೆ ನಡೆಯುತ್ತಿದೆ. ವಿದ್ಯುತ್​ ಲೈನ್​ನಿಂದಾಗಿ ನಿಗಮಕ್ಕೆ ವಾರ್ಷಿಕ 190 ಕೋಟಿ ರೂ. ಉಳಿತಾಯವಾಗುತ್ತಿದೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಕ್ಸಿಕ್ಯೂಟಿವ್​ ಲಾಂಜ್​ ಉದ್ಘಾಟಿಸಿ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯ ಜೊತೆ ವಿಲೀನ ಮಾಡಬೇಕೆನ್ನುವ ಪ್ರಸ್ತಾವಕ್ಕೆ ಶಕ್ತಿ ತುಂಬಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇಂದ್ರಾಳಿ ರೈಲು ನಿಲ್ದಾಣ ಅಭಿವೃದ್ಧಿ ಪಡಿಸಬೇಕೆಂಬ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಹೇಳಿದರು.

ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯ ಜೊತೆ ವಿಲೀನ ಮಾಡಿದರೆ ಅಭಿವೃದ್ಧಿಗೆ ವೇಗ ಸಿಗಲಿದೆ. ಹೆಚ್ಚಿನ ರೈಲುಗಳ ಸೇವೆ ಲಭ್ಯವಾಗುತ್ತದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ಎಕ್ಸಿಕ್ಯೂಟಿವ್​ ಲಾಂಜ್​ ಉದ್ಘಾಟನೆಯಾಗಿರುವುದರಿಂದ ರೈಲು ನಿಲ್ದಾಣದಲ್ಲಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಬಂದಾಗ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಸಕಲೇಶಪುರದ ಬಳಿ ರೈಲು ಹಳಿಗೆ ಮಣ್ಣು ಜರಿದು ಬಿದ್ದು, ರೈಲು ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಸುಗಮಸಂಚಾರಕ್ಕಾಗಿ ಶಿರಾಡಿ ರಾಷ್ಟ್ರೀಯ ಹೆದ್ದಾರಿ ಸುರಂಗ ಮಾರ್ಗ ಯೋಜನೆಯಲ್ಲಿ ರೈಲ್ವೆ ಮಾರ್ಗವನ್ನೂ ಸೇರ್ಪಡೆಗೊಳಿಸಬೇಕು ಎಂಬುದಾಗಿ ಈಗಾಗಲೇ ಕೇಂದ್ರ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರಿಗೆ ಮನವಿ ನೀಡಲಾಗಿದೆ ಎಂದರು.

ವಲಯ ವ್ಯವಸ್ಥಾಪಕ ಬಾಳಾಸಾಹೇಬ್​ ನಿಕಂ, ದಿಲೀಪ್​ ಡಿ. ಭಟ್​, ಎಸ್​.ಕೆ. ಬಾಲಾ, ಆರ್​.ಡಿ. ಗೋಲಬ್​, ಪಿಆರ್​ಒ ಸುಧಾ ಕೃಷ್ಣಮೂರ್ತಿ, ಜಿ.ಡಿ. ಮೀನಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net