ಈಝೀ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

hospital
ಮೋರ್ಗನ್ಸ್ ಗೇಟ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಈಝೀ ಆಯುರ್ವೇದ ಆಸ್ಪತ್ರೆ ಭಾನುವಾರ ಉದ್ಘಾಟನೆಗೊಂಡಿತು. ಶಾಸಕ ಡಿ. ವೇದವ್ಯಾಸ ಕಾಮತ್, ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜನಾರ್ದನ ವಿ. ಹೆಬ್ಬಾರ್, ಮಾಧವ್ ಬಾಗ್‌ನ ಸಂಸ್ಥಾಪಕ ಡಾ.ರೋಹಿತ್ ಮಾಧವ್ ಸಾನೆ ಇದ್ದರು.
Published on

ಮಂಗಳೂರು: ಮೋರ್ಗನ್ಸ್ ಗೇಟ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಈಝೀ ಆಯುರ್ವೇದ ಆಸ್ಪತ್ರೆ ಭಾನುವಾರ ಉದ್ಘಾಟನೆಗೊಂಡಿತು.

ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಆಯುರ್ವೇದ ಪುರಾತನ ಚಿಕಿತ್ಸಾ ಪದ್ದತಿಯಾಗಿದೆ. ಇಂದು ಔಷಧ ಸೇವಿಸಿದ ಕೂಡಲೇ ರೋಗ ಗುಣವಾಗಬೇಕು ಎಂನ ಮಾನಸಿಕತೆ ಇದೆ. ಇಂದಿನ ಒತ್ತಡದ ಜೀವನದಲ್ಲಿ ಆಯುರ್ವೇದ ಪ್ರಾಮುಖ್ಯತೆ ಪಡೆದಿದ್ದು, ಮನಸ್ಸನನ್ನು ಹತೋಟಿಯಲ್ಲಿ ಇರಿಸಲು ಆಯುರ್ವೇದ ಚಿಕಿತ್ಸೆ ಅಗತ್ಯ. ಈ ನಿಟ್ಟಿನಲ್ಲಿ ಈಝೀ ಆಯುರ್ವೇದ ಆಸ್ಪತ್ರೆ ಮಂಗಳೂರಿಗೆ ಮಹತ್ವದ ಕೊಡುಗೆಯಾಗಲಿದೆ. ಮಂಗಳೂರಿನಲ್ಲಿ ಆಯುರ್ವೇದ ಸ್ಫೋರ್ಟ್ಸ್ ಮೆಡಿಸಿನ್ ಸೆಂಟರ್ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯ ಕೊರತೆಯನ್ನು ಈಝೀ ಆಯುರ್ವೇದ ಆಸ್ಪತ್ರೆ ನೀಗಿಸಲಿದೆ. ಆಯುರ್ವೇದಲ್ಲಿ ಯಾವುದೇ ಅಡ್ಡಪರಿಣಾಮ ಇಲ್ಲ. ಹೀಗಾಗಿ ಎಲ್ಲರೂ ಆಯುರ್ವೇದ ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್, ಭಾರತ್ ಬೀಡಿ ಕಂಪೆನಿ ನಿರ್ದೇಶಕ ಆನಂದ್ ಜಿ.ಪೈ, ಸ್ಥಳೀಯ ಕಾರ್ಪೋರೇಟರ್ ಭಾನುಮತಿ ಪಿ.ಎಸ್. ಉಪಸ್ಥಿತರಿದ್ದರು.

ಆಸ್ಪತ್ರೆಯ ಸಿಎಂಒ ಡಾ.ರವಿಗಣೇಶ್ ಮೊಗ್ರ ಸ್ವಾಗತಿಸಿದರು. ಡಾ. ಅಮೃತಾ, ಕಾತ್ಯಾಯಿನಿ ಹೆಬ್ಬಾರ್ ಉಪಸ್ಥಿತರಿದ್ದರು. ಬಿಂದಿಯಾ ಶೆಟ್ಟಿ ವಂದಿಸಿದರು. ಸನಾತನ ನಾಟ್ಯಾಲಯ ತಂಡದಿಂದ ಈ ವೇಳೆ ನೃತ್ಯ ಕಾರ್ಯಕ್ರಮ ನಡೆಯಿತು.

ಧನಾತ್ಮಕ ಮಾತು ಔಷಧಕ್ಕಿಂತ ಪರಿಣಾಮಕಾರಿ

ಈಝೀ ಆಯುರ್ವೇದ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಮಾಧವ್ ಬಾಗ್‌ನ ಸಂಸ್ಥಾಪಕ ಡಾ.ರೋಹಿತ್ ಮಾಧವ್ ಸಾನೆ, ವೈದ್ಯರ ಧನಾತ್ಮಕ ಮಾತುಗಳು ಔಷಧಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಈಝೀ ಆಯುರ್ವೇದ ಆಸ್ಪತ್ರೆಯ ಡಾ. ಜೆವಿ ಹೆಬ್ಬಾರ್, ಡಾ. ರವಿಗಣೇಶ್ ಮೊಗ್ರ, ಡಾ. ಅಮೃತಾ ಅವರು ಆಯುರ್ವೇದದಲ್ಲಿ ಜ್ಞಾನವಂತರಾಗಿದ್ದು, ಅವರ ಬದ್ಧತೆ ಮೆಚ್ಚುವಂತದ್ದು ಎಂದರು.

ಆಯುರ್ವೇ ಚಿಕಿತ್ಸೆಗೆ ಈಝೀ ಆಸ್ಪತ್ರೆ ಸ್ಥಾಪನೆ

ಈಝೀ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜನಾರ್ದನ ವಿ. ಹೆಬ್ಬಾರ್ ಮಾತನಾಡಿ, ಆಯುರ್ವೇದದಲ್ಲಿ ಪದವಿ ಪಡೆದ ಬಳಿಕ 2009ರಲ್ಲಿ ಈಝೀ ಆಯುರ್ವೇದ ಡಾಟ್‌ಕಾಂ ವೆಬ್‌ಸೈಟ್ ಆರಂಭಿಸಿದೆ. ಇದರಲ್ಲಿ ಈಗಾಗಲೇ 5000ಕ್ಕೂ ಹೆಚ್ಚು ಲೇಖನ ಪ್ರಕಟಿಸಲಾಗಿದೆ. 25 ಪುಸ್ತಕಗಳು ಹಾಗೂ ಇ- ಪುಸ್ತಕಗಳನ್ನು ಇಂಗ್ಲಿಷ್, ಕನ್ನಡ, ಹಿಂದಿ, ಮಲಯಾಳಂನಲ್ಲಿ ರಚಿಸಿ ಪ್ರಕಟಿಸಲಾಗಿದೆ. ಇದೀಗ ಎಲ್ಲ ವಿಧದ ವ್ಯಾಧಿಗಳನ್ನು ಗುಣಪಡಿಸಲು ಮಂಗಳೂರಿನಲ್ಲಿ ಈಝೀ ಆಯುರ್ವೇದ ಆಸ್ಪತ್ರೆ ಸ್ಥಾಪಿಸಲಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ಆಯುರ್ವೇದ ಚಿಕಿತ್ಸೆ ಜತೆಗೆ ದೇಶ,ವಿದೇಶದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net