ಅಶ್ವತ್ಥಾಮನ ವೇಷದಲ್ಲಿ ನಾಟಕ ಪ್ರದರ್ಶನ ಉದ್ಘಾಟನೆ

Inauguration of drama performance in the guise of Ashwatthama
ಇಳಕಲ್ಲದ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡದ ರಂಗಸಮಾಜ ವತಿಯಿಂದ ಆಯೋಜಿಸಿದ ನಾಟಕ ಪ್ರದರ್ಶನಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿದರು.
Published on

ಇಳಕಲ್ಲ(ಗ್ರಾ): ನಗರದ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡ ರಂಗಸಮಾಜದ ವತಿಯಿಂದ ಆಯೋಜಿಸಿರುವ ರಂಗ ನಾಟಕೋತ್ಸವದ ಮೊದಲ ದಿನದಂದು ರಕ್ತ ರಾತ್ರಿ ನಾಟಕ ಪ್ರದರ್ಶನದ ಉದ್ಘಾಟನೆಯನ್ನು ವೀರಶೈವ ಲಿಂಗಾಯತ ಅಭಿವದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಅಶ್ವತ್ಥಾಮನ ವೇಷದಲ್ಲಿ ನೆರವೇರಿಸಿದ್ದು ಗಮನ ಸೆಳೆಯಿತು.

ಇತಿಹಾಸ ಪುರುಷ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನ ಉದ್ಘಾಟಿಸಲು ರೋಮಾಂಚನವಾಗುತ್ತಿದೆ. ಐತಿಹಾಸಿಕ ನಾಟಕ ಉಚಿತ ವೀಕ್ಷಣೆಗೆ ಅವಕಾಶ ನೀಡಿದ್ದು ಸಂತಸವಾಗುತ್ತಿದೆ ಎಂದು ಹೇಳಿದರು.

ರಂಗಸಮಾಜದ ಅಧ್ಯಕ್ಷ, ಕಲಾವಿದ ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಸಮಾಜದ ಅಧ್ಯಕ್ಷನಾದ ಮೇಲೆ ಪ್ರಥಮ ನಾಟಕೋತ್ಸವವನ್ನು ಕಲಾವಿದರ ತವರೂರಾದ ಇಳಕಲ್ಲನಲ್ಲಿ ಹಮ್ಮಿಕೊಂಡಿರುವುದು ಹೆಮ್ಮೆಯಾಗುತ್ತಿದೆ ಎಂದು ಹೇಳಿದರು. ರಂಗಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ, ನಾಟ್ಯರಾಣಿ ಕಲಾಸಂಘದ ಅಧ್ಯಕ್ಷೆ ಉಮಾರಾಣಿ ಬಾರಿಗಿಡದ ಮತ್ತು ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net