ದೊಡ್ಡಮ್ಮತಾಯಿ ದೇಗುಲ ಉದ್ಘಾಟನೆ

08BTP01
ಬೆಟ್ಟದಪುರ ಸಮೀಪದ ಕೂರಗಲ್ಲು ಗ್ರಾಮದಲ್ಲಿ ಉದ್ಘಾಟನೆಗೆ ಸಿದ್ಧಗೊಂಡ ದೊಡ್ಡಮ್ಮತಾಯಿ, ಚಿಕ್ಕಮ್ಮತಾಯಿ ನೂತನ ದೇಗುಲ.
Published on

ಬೆಟ್ಟದಪುರ: ಸಮೀಪದ ಕೂರಗಲ್ಲು ಗ್ರಾಮ ದೇವತೆ ಶ್ರೀ ದೊಡ್ಡಮ್ಮತಾಯಿ ಹಾಗೂ ಚಿಕ್ಕಮ್ಮತಾಯಿ ನೂತನ ದೇವಸ್ಥಾನಗಳು ಮೇ 10ರಂದು ಉದ್ಘಾಟನೆಗೊಳ್ಳಲಿವೆ.

ಶಿಥಿಲಾವಸ್ಥೆಯಲ್ಲಿದ್ದ ದೇವಾಲಯಗಳ ಅಭಿವೃದ್ಧಿಗೆ ಐದು ವರ್ಷಗಳ ಹಿಂದೆಯೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಿಂದೆ ಶಾಸಕರಾಗಿದ್ದ ಕೆ.ಮಹದೇವ್ ದೇವಾಲಯದ ಮರು ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಇದರೊಂದಿಗೆ ಗ್ರಾಮಸ್ಥರು ದೊಡ್ಡಮ್ಮತಾಯಿ ದೇವಾಲಯದ ಮರು ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿ ನೂತನ ದೇವಸ್ಥಾನ ನಿರ್ಮಿಸಲಾಗಿದೆ.

ಅಕ್ಷಯ ತೃತೀಯಾ ಶುಭ ದಿವಸವಾಗಿದ್ದು, ಕಲಶ ಸ್ಥಾಪನೆ, ಗಣಪತಿ ಪೂಜೆ, ಗಣ ಹೋಮ, ಚಂಡಿ ಹೋಮ, ವಿಗ್ರಹಗಳಿಗೆ ನೇತ್ರೋನ್ಮೀಲನ, ಅಂಕುರಾರ್ಪಣೆ, ಕದಳಿ ಛೇದನ, ಮಹಾಮಂಗಳಾರತಿ, ಅನ್ನದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಡಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದೇವಾಲಯ ಸಮಿತಿ ಮುಖ್ಯಸ್ಥ ಚಂದ್ರೆಗೌಡ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net