ಕ್ರೀಡೆಯಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ

UDP-13-2-Kabaddi
Published on

ಶಾಸಕ ಯಶ್​ಪಾಲ್​ ಹೇಳಿಕೆ | ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ

ಉಡುಪಿ: ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದಾಗಿದೆ. ಇತ್ತೀಚೆಗೆ ಭಾರತೀಯರು ಕ್ರೀಡಾ ಲೋಕದಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದು, ತಾವುಗಳೂ ಸಹ ಕ್ರೀಡೆಯಲ್ಲಿ ತೊಡಗಿಕೊಂಡು ದೇಶದ ಕೀರ್ತಿ ಪಸರಿಸಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಕರೆ ನೀಡಿದರು.

ಶುಭ ಹಾರೈಕೆ

ಉಡುಪಿ ತಾಲೂಕಿನ ನಿಟ್ಟೂರು ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಶುಭ ಹಾರೈಸಿದರು.

ನಿಟ್ಟೂರು ಎಜುಕೇಶನಲ್​ ಸೊಸೈಟಿಯ ಅಧ್ಯಕ್ಷ ಕೆ.ರಘುಪತಿ ಭಟ್​, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಗಣಪತಿ ಭಟ್​, ನಿಟ್ಟೂರು ಎಜುಕೇಶನಲ್​ ಸೊಸೈಟಿಯ ಕಾರ್ಯದರ್ಶಿ ಮುರಲಿ ಕಡೆಕಾರ್​, ಉಪಾಧ್ಯಕ್ಷ ಎಸ್​.ವಿ. ಭಟ್​, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್​ ಪಿ. ಪೂಜಾರಿ, ಉದ್ಯಮಿ ಪ್ರಭಾಕರ್​ ಜಿ., ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ್​ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪದ್ಮಾವತಿ, ಆಡಳಿತ ಮಂಡಳಿಯ ಉಪಾಧ್ಯಕ್ಷ ಯೋಗಿಶ್ಚಂದ್ರಧರ, ನಗರಸಭಾ ಸದಸ್ಯ ಗಿರಿಧರ ಆಚಾರ್ಯ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯಿನಿ ಅನಸೂಯಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ ಎಂ. ವಂದಿಸಿದರು.

ಕಾರ್ಕಳ, ಕುಂದಾಪುರ ವಲಯ ಪ್ರಥಮ

UDP-13-2A-Kabaddi
ವಿಜೇತ ತಂಡಗಳಿಗೆ ಪ್ರಭಾಕರ ಪೂಜಾರಿ ಬಹುಮಾನ ವಿತರಿಸಿದರು. ಎಂ.ಗಂಗಾಧರ್​ ರಾವ್​, ಸಿ.ಎ. ಪ್ರದೀಪ್​ ಜೋಗಿ, ಸಂತೋಷ ಕರ್ನೇಲಿಯೊ ಇತರರಿದ್ದರು.

ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಶಾಲೆಯ ಹಳೆಯ ವಿದ್ಯಾರ್ಥಿ, ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಬಹುಮಾನ ವಿತರಿಸಿದರು. 17ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕಾರ್ಕಳ ವಲಯ ಹಾಗೂ ಬಾಲಕಿಯರ ವಿಭಾಗದಲ್ಲಿ ಕುಂದಾಪುರ ವಲಯ ಪ್ರಥಮ ಸ್ಥಾನ ಗಳಿಸಿದೆ. 14ರ ಮಯೋಮಿತಿಯ ಬಾಲಕರ ವಿಭಾಗದಲ್ಲಿ ಬ್ರಹ್ಮಾವರ ವಲಯ, ಬಾಲಕಿಯರ ವಿಭಾಗದಲ್ಲಿ ಉಡುಪಿ ವಲಯ ಪ್ರಥಮ ಸ್ಥಾನ ಗಳಿಸಿತು.

UDP-13-2B-Kabaddi
17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕುಂದಾಪುರ ವಲಯ ಪ್ರಥಮ ಸ್ಥಾನ ಗಳಿಸಿದೆ.

ನಿಟ್ಟೂರು ಎಜುಕೇಶನಲ್​ ಸೊಸೈಟಿಯ ಉಪಾಧ್ಯಕ್ಷ ಎಂ.ಗಂಗಾಧರ್​ ರಾವ್​, ಹಳೆಯವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಿ.ಎ. ಪ್ರದೀಪ್​ ಜೋಗಿ, ನಿಟ್ಟೂರು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ ಕರ್ನೇಲಿಯೊ, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ವಿಜಯ
ಕುಮಾರ್​ ಶೆಟ್ಟಿ, ಸಹಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದರು.

UDP-13-2C-Kabaddi
14ರ ಮಯೋಮಿತಿಯ ಬಾಲಕರ ವಿಭಾಗದಲ್ಲಿ ಬ್ರಹ್ಮಾವರ ವಲಯ ಪ್ರಥಮ ಸ್ಥಾನ ಗಳಿಸಿದೆ.

ಮುರಲಿ ಕಡೆಕಾರ್​ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ ಎಂ. ವಂದಿಸಿದರು.

UDP-13-2D-Kabaddi
14ರ ಮಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಉಡುಪಿ ವಲಯ ಪ್ರಥಮ ಸ್ಥಾನ ಗಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net