ಕಿನ್ನಿಂಗಾರ್ ನಲ್ಲಿ ಸಾರ್ವಜನಿಕ ವಿತರಣಾ ಕೇಂದ್ರ ಉದ್ಘಾಟನೆ

bdk
ಕಿನ್ನಿಂಗಾರಿನಲ್ಲಿ ತಾಲೂಕಿನ ಮೊದಲ ಕೆ.ಸ್ಟೋರ್‌ಗೆ ಶಾಸಕ ಎನ್.ಎ.ನೆಲ್ಲಿಕುನ್ನು ಚಾಲನೆ ನೀಡಿದರು.
Published on

ಮುಳ್ಳೇರಿಯ: ಬೆಳ್ಳೂರು ಗ್ರಾಪಂ ಕಿನ್ನಿಂಗಾರ್ ನಲ್ಲಿ ಸಾರ್ವಜನಿಕ ವಿತರಣಾ ಕೇಂದ್ರವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಬುಧವಾರ ಉದ್ಘಾಟಿಸಿದರು.

ಬೆಳ್ಳೂರು ಗ್ರಾಪಂ ಅಧ್ಯಕ್ಷ ಶ್ರೀಧರ ಎಂ. ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಸದಸ್ಯರಾದ ದುರ್ಗಾದೇವಿ, ಸುಜಾತಾ ಎಂ.ರೈ, ಗೀತಾ, ವಿವಿಧ ಪಕ್ಷಗಳ ನೇತಾರರಾದ ಸೂಫಿ ಕೆ.ಎಂ., ಜಯಾನಂದ ಕೆ., ಅಬ್ಬಾಸ್ ಅಲಿ, ಸತೀಶನ್, ಜಿಲ್ಲಾ ಕೌನ್ಸಿಲ್ ಸದಸ್ಯ ಸುಕುಮಾರನ್, ವಿತರಣಾ ಕೇಂದ್ರದ ವಸಂತ ಶೆಣೈ ಮತ್ತು ಸುಧಾ ವಿ.ಶೆಣೈ, ಶ್ಯಾಮಲಾ ಸಸಿಹಿತ್ಲು, ಮಂದಾರ ಕುಟುಂಬಶ್ರೀ ಸದಸ್ಯರು, ವಿವಿಧ ಕ್ಲಬ್‌ಗಳ ಸದಸ್ಯರು, ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು. ಜಿಲ್ಲಾ ವಿತರಣಾಧಿಕಾರಿ ಸಜ್ಜಾದ್ ಎ. ಸ್ವಾಗತಿಸಿ, ಕೆ.ವಿ ದಿನೇಶನ್ ವಂದಿಸಿದರು. ಜಯರಾಜ ರೈ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ತಾಲೂಕಿನ ಪ್ರಥಮ ಕೆ-ಸ್ಟೋರ್ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net