ಮವ್ವಾರಲ್ಲಿ ವಿಪತ್ತು ನಿರ್ವಹಣಾ ಘಟಕ ಉದ್ಘಾಟನೆ

26-vipathu
Published on

ಮುಳ್ಳೇರಿಯ: ಕಾರಡ್ಕ ವಲಯದ ಶ್ರೀಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮವ್ವಾರು ಘಟಕದ ಉದ್ಘಾಟನಾ ಸಮಾರಂಭ ಮವ್ವಾರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು.

ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ ಉದ್ಘಾಟಿಸಿದರು.ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿದರು.

ತಾಲೂಕು ಯೋಜನಾಧಿಕಾರಿಗಳು ಘಟಕದ ಉತ್ತಮ ನಿರ್ವಹಣೆಗೆ ಶುಭ ಹಾರೈಸಿದರು. ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳು ಘಟಕ ಸದಸ್ಯರಿಗೆ ದಾಖಲಾತಿ ಹಸ್ತಾಂತರಿಸಿದರು. ವಲಯ ಒಕ್ಕೂಟದ ಅಧ್ಯಕ್ಷ ಸುರೇಶ್ ಯಾದವ್, ಜನಜಾಗೃತಿ ವೇದಿಕೆ ಸದಸ್ಯ ಬಾಲಕೃಷ್ಣ ರೈ ಮವ್ವಾರು, ಒಕ್ಕೂಟದ ಅಧ್ಯಕ್ಷ ದಾಕ್ಷಾಯಿಣಿ, ನಿಕಟಪೂರ್ವ ಅಧ್ಯಕ್ಷ ಕೊರಗಪ್ಪ, ವಲಯ ಮೇಲ್ವಿಚಾರಕ ಸುರೇಶ್, ಘಟಕ ಸಂಯೋಜಕಿ ರಾಜೇಶ್ವರಿ, ಘಟಕ ಪ್ರತಿನಿಧಿ ಪದ್ಮನಾಭ ಉಪಸ್ಥಿತರಿದ್ದರು. ಸಿಂಧೂ ನಿರೂಪಿಸಿದರು. ರಾಜೇಶ್ವರಿ ಸ್ವಾಗತಿಸಿ, ಶಶಿಧರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net