

ರಾಯಚೂರು ರಾಜ್ಯದಲ್ಲಿ ಬೆಲೆ ಏರಿಕೆಯಾಗಿದ್ದರೆ ಅದಕ್ಕೆ ಕಾರಣ ನಾನಲ್ಲ, ನಮ್ಮ ರ‍್ಕಾರವಲ್ಲ. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ-ಜೆಡಿಎಸ್‌ನವರೇ ಕಾರಣವಾಗಿದ್ದಾರೆ. ನಮ್ಮ ರ‍್ಕಾರದಿಂದ ಒಂದೇ ದಿನ ೯೩೬ ಕೋಟಿ ಮೊತ್ತದ ಅಭಿವೃದ್ಧಿ ಕರ‍್ಯ ಉದ್ಘಾಟನೆ ಮಾಡಿದ್ದೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಯರಗೇರಾ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಠ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಬುಡಕಟ್ಟು ಸಾಂಸ್ಕೃತಿಕ ಉತ್ಸವ, ಆದಿಕವಿ ಮರ‍್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನಾಮಫಲಕ ಅನಾವರಣ ಹಾಗೂ ೩೭೧ ಜೆ ದಶಮಾನೋತ್ಸವ ಮತ್ತು ೯೩೬ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಅಭಿವೃದ್ಧಿ ಮಾಡಲಿಲ್ಲ. ಈಗ ಕಾಂಗ್ರೆಸ್ ಮಾಡುತ್ತಿರುವ ಅಭಿವೃದ್ಧಿಯನ್ನು ಬಿಜೆಪಿಯವರು ಸಹಿಸದೆ ಸುಳ್ಳಿನ ಸರಮಾಲೆ ಹಂಚುತ್ತಾ ತಿರುಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವು ಈ ಚುನಾವಣೆ ವೇಳೆ ೫೬೦ ಭರವಸೆಗಳನ್ನು ನೀಡಿದ್ದೆವು. ಇದರಲ್ಲಿ ೨೩೫ ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಮುಂದಿನ ಮೂರು ರ‍್ಷಗಳಲ್ಲಿ ಉಳಿದ ಭರವಸೆಗಳನ್ನೂ ಈಡೇರಿಸುತ್ತೇವೆ ಎಂದರು.
೨೦೧೩ ರಿಂದ ೨೦೧೮ ರವರೆಗೆ ನಾವು ಆಡಳಿತ ನಡೆಸಿ ಕೊಟ್ಟ ಭರವಸೆಗಳೆಲ್ಲವನ್ನೂ ಈಡೇರಿಸಿ ಪ್ರಣಾಳಿಕೆಯಲ್ಲಿ ಇಲ್ಲದ ಹೆಚ್ಚುವರಿ ೩೦ ಭರವಸೆಗಳನ್ನು ಈಡೇರಿಸಿ ದಾಖಲೆ ಮಾಡಿದ್ದೇವೆ. ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ್ದೇನು ಎಂದು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದರು. ಚಿನ್ನ, ಬೆಳ್ಳಿ, ಅಕ್ಕಿ, ಬೇಳೆ, ಅಡಿಗೆ ಎಣ್ಣೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ರಸಗೊಬ್ಬರ ಎಲ್ಲದರ ಬೆಲೆ ಹೆಚ್ಚಿಸಿದ್ದು ಮೋದಿ ರ‍್ಕಾರ. ಆದ್ರೂ ಬಿಜೆಪಿ ನಾಚಿಕೆ ಇಲ್ಲದೆ ರಾಜ್ಯದ ಜನರ ಎದುರು ಸುಳ್ಳು ಹೇಳಿ ನಾಚಿಕೆ ಇಲ್ಲದಂತೆ ರ‍್ತಿಸುತ್ತಿದೆ ಎಂದು ಟೀಕಿಸಿದರು.
ಕಲ್ಯಾಣ ರ‍್ನಾಟಕ ಅಭಿವೃದ್ಧಿಗೆ ಕಾರಣವಾಗಿದ್ದು ೩೭೧ಜೆ. ಇದನ್ನು ಜಾರಿಗೆ ತಂದಿದ್ದು ಮಲ್ಲಿಕರ‍್ಜುನ ರ‍್ಗೆ, ಧರಂ ಸಿಂಗ್ ಅವರ ನೇತೃತ್ವದ ಹೋರಾಟ ಮತ್ತು ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ರ‍್ಕಾರ. ಈ ೩೭೧ ಜೆ ಜಾರಿಗೊಳಿಸಲು ಬಿಜೆಪಿ ಸಂಪರ‍್ಣ ವಿರುದ್ಧವಿತ್ತು. ವಾಜಪೇಯಿ ಪ್ರಧಾನಿ ಆಗಿದ್ದಾಗ ಉಪಪ್ರಧಾನಿ ಅಡ್ವಾಣಿ ಅವರು ೩೭೧ಜೆ ಜಾರಿ ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಬಿಜೆಪಿಯವರಿಗೆ ಅಭಿವೃದ್ಧಿ ವಿಚಾರದಲ್ಲಿ ನಮ್ಮನ್ನು ಟೀಕಿಸುವ ಯಾವ ನೈತಿಕ ಹಕ್ಕೂ ಇಲ್ಲ ಎಂದರು.
ಬಿಜೆಪಿಯ ಮನೆ ದೇವರೇ ಸುಳ್ಳು. ಅವರು ಕೇಂದ್ರದಲ್ಲಿ ರ‍್ಕಾರವಿದ್ದರೂ ರಾಜ್ಯಕ್ಕೆ ನಿರಂತರವಾಗಿ ದ್ರೋಹ ಎಸಗುತ್ತಿದ್ದಾರೆ. ಬಿಜೆಪಿ ನಾಯಕರು ಮತ್ತು ಬಿಜೆಪಿ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮುಂದೆ ಬರುತ್ತಿಲ್ಲ. ರಾಜ್ಯಕ್ಕೆ ಕೇಂದ್ರದ ಬಿಜೆಪಿ ಮಾಡುತ್ತಿರುವ ದ್ರೋಹವನ್ನು ತಡೆಯಲು ಬಿಜೆಪಿಯ ಒಬ್ಬ ಸಂಸದರೂ ಸಿದ್ದರಿಲ್ಲ. ಇದು ಬಿಜೆಪಿಯವರ ಯೋಗ್ಯತೆ ಎಂದು ಟೀಕಿಸಿದರು.
ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕರ‍್ಜುನ ರ‍್ಗೆ ಮಾತನಾಡಿ, ದೇಶ ಕಠಿಣ ಪರಸ್ಥಿತಿಯಲ್ಲಿದ್ದರೂ ದೇಶ ಪ್ರಧಾನಿ ನರೇಂದ್ ಮೋದಿಯವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ, ಬುದ್ದಬೇಕೋ,ಯುದ್ದಬೇಕೋ ಎಂಬದನ್ನು ಜನರು ನರ‍್ಧರಿಸಬೇಕು. ದೇಶ ಜನತೆ ನಂಬಿರುವ ಇಂಧನದ ಮೂಲವಾದ ಇರಾನ್ ಮೇಲೆ ಯುದ್ದ ನಡೆಯುತ್ತಿದೆ. ಆದರೆ ಮೋದಿಯವರು ಮಾತನಾಡುತ್ತಿಲ್ಲ. ಪಾಕಿಸ್ತಾನದ ಉಗ್ರವಾದಿಗಳು ದಾಳಿ ಮಾಡಿ ೨೬ ಜನರ ಜೀವ ಬಲಿಪಡೆದರು. ಆದರೆ ರ‍್ವ ಪಕ್ಷಗಳ ಸಭೆ ಕರೆದು ರ‍್ಚಿಸುವಂತೆ ಒತ್ತಾಯಿಸಿದರೆ ಎರಡು ಬಾರಿ ರ‍್ವಪಕ್ಷಗಳ ಸಭೆಗೂ ನರೇಂದ್ರ ಮೊದಿಯವರು ಬರಲಿಲ್ಲ. ಬದಲಾಗಿ ಬಿಹಾರ ಚುನಾವಣೆಯಲ್ಲಿ ಪ್ರಚಾರದಲ್ಲಿದ್ದರು ಎಂದು ಲೇವಡಿಮಾಡಿದರು.
ದೇಶದ ಮತ್ತು ಸೈನಿಕರು ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ತಾವೇ ಯುದ್ದ ಮಾಡಿದ ರೀತಿಯಲ್ಲಿ ಕ್ರೇಡಿಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಯುದ್ದ ಕಾಲದಲ್ಲಿ ದೇಶದಲ್ಲಿ ಒಕ್ಕೂಟ ಇರಬೇಕು. ಒಕ್ಕೂಟವನ್ನು ಚುನಾವಣಾ ಲಾಭ ಪಡೆಯುತ್ತಿದ್ದು, ದೇಶದ ಬದಲು ಪಕ್ಷ ಉಳಿಸಿಕೊಳ್ಳಲು ನರೇಂದ್ರ ಮೋದಿಯವರು ಪ್ರಯ್ನಿಸುತ್ತಿದ್ದಾರೆ.ಇವರಿಂದ ದೇಶ ಉಳಿಯಲು ಸಾಧ್ಯವೇ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಬಗೆಗೆ ಅಪಪ್ರಚಾರ ಮಾಡುತ್ತಿದ್ದರೆ. ಯಾವದಕ್ಕೂ ತಲೆಕೆಡಿಸಿಕೊಳ್ಳದೇ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ರಾಜ್ಯ ಕಾಂಗ್ರೆಸ್ ರ‍್ಕಾರ ಮಾಡುತ್ತಿದೆ. ಪಕ್ಷ ಒಟ್ಟಾಗಿ ಕೆಲಸ ಮಾಡುತ್ತಿದೆ. ಈ ಭಾಗದಲ್ಲಿ ೩೭೧(ಜೆ) ಜಾರಿಗೊಂಡ ನಂತರವೇ ಕಲ್ಯಾಣ ರ‍್ನಾಟಕ ಭಾಗದ ಬೆಳವಣಿಗೆ ಸಹಕಾರಿಯಾಗಿದೆ. ಜನರಿಗೆ ನೀಡಿದ ಒಳ್ಳೆಯ ಕೆಲಸಗಳನ್ನು ಜನರು ಮರೆಯಬಾರದು. ಈ ಭಾಗದಲ್ಲಿ ಅತಿಹೆಚ್ಚು ಸಂಸದರನ್ನು ಜನರು ನೀಡಿದ್ದಾರೆ. ಅಭಿನಂದನೀಯ. ಆದರೆ ಕಾಂಗ್ರೆಸ್ ಪಕ್ಷ ಯಾರಿಗೂ ಹೆದರುವದಿಲ್ಲ. ದೇಶ ಉಳಿಸಲು ಶಾಂತಿಗಾಗಿ ಹೆದರಬೇದರ ನರ‍್ಧಾರ ಕೈಗೊಳ್ಳುತ್ತದೆ. ಕೇಂದ್ರ ರ‍್ಕಾರದಲ್ಲಿ ೩೦ ಲಕ್ಷ ಹುದ್ದೆಗಳು ಖಾಲಿಯಿದ್ದರೂ ನೇಮಕಾತಿ ಮಾಡಲಿಲ್ಲ. ಆದರೆ ರಾಜ್ಯ ರ‍್ಕಾರ ನೇಮಕಾತಿ ಪ್ರಾರಂಭಿಸಿದೆ. ಕೊಟ್ಟ ಸವಲತ್ತು ಪಡೆದು ಅಭಿವೃದ್ದಿ ಬೆಂಬಲಿಸುವರನ್ನು ಬೆಂಬಲಿಸಿ ಎಂದರು.
ಬಾಕ್ಸ್ ಮಾಡಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕರ‍್ಜುನ ರ‍್ಗೆ ಮಲ್ಲಿಕರ‍್ಜುನ ರ‍್ಗೆ ಅವರು ಭಾಷಣ ಪ್ರಾರಂಭದ ಸಂರ‍್ಭದಲ್ಲಿ ರಾಯಚೂರು ವಿಶ್ವವಿದ್ಯಾಲಯಕ್ಕೆ ಆದಿಕವಿ ಮರ‍್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನಾಮಫಲಕ ಅನಾವರಣ ಮಾಡಲಾಗಿದೆ ಎನ್ನುವುದರ ಬದಲು ಅಗ್ರೀಕಲ್ಚರ್ ವಿಶ್ವವಿದ್ಯಾಲಯಕ್ಕೆ ಆದಿಕವಿ ಮರ‍್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಎಂದು ಹೆಸರು ಮರು ನಾಮಕರಣ ಮಾಡಲಾಗಿದೆಂದು ಮಾತು ತಪ್ಪಿದರು. ಇದರಿಂದ ವೇದಿಕೆಯಲ್ಲಿದ್ದ ಕೆಲವರಿಗೆ ಮುಜುಗರ ಎನಿಸಿತು.