

ಹೊಸಪೇಟೆ: ನಗರದ ಟಿ.ಎಂ.ಎ.ಇ.ಎಸ್. ಪಾಲಿಟೆಕ್ನಿಕ್‌ನಲ್ಲಿ ಮೈನಿಂಗ್ ಮತ್ತು ಮೆಟಲರ್ಜಿ ವಿಭಾಗದ ನೂತನ ಕಂಪ್ಯೂಟರ್ ಲ್ಯಾಬ್‌ನ್ನು ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಕಾರ್ಯದರ್ಶಿ ಡಾ.ಟಿ.ಎಂ. ಚಂದ್ರಶೇಖರಯ್ಯ ಗುರುವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಡಾ.ಚಂದ್ರಶೇಖರಯ್ಯ, ಕೋಲಾರದ ನಂತರ ಮೈನಿಂಗ್ ಮತ್ತು ಮೆಟಲರ್ಜಿ ವಿಭಾಗ ಉನ್ನತೀಕರಣಗೊಂಡಿದ್ದು ನಮ್ಮ ಟಿ.ಎಂ.ಎ.ಇ.ಎಸ್ ಸಂಸ್ಥೆಯಲ್ಲಿ ಮಾತ್ರ. ಹೀಗಾಗಿ ಕಾಲೇಜಿನ ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಬೇಕು, ಕಾಲೇಜಿನ ೩೦ ಗಣಕ ಯಂತ್ರಗಳನ್ನು ದೇಣಿಗೆಯಾಗಿ ನೀಡಿದ ಸಂಡೂರಿನ ಕುಮಾರಸ್ವಾಮಿ ಮಿನರಲ್ಸ್ ಪ್ರೆöÊ. ಲಿ. ಕಾರ್ಯ ಶ್ಲಾಘನೀಯ ಎಂದರು.
ಶ್ರೀ ಕುಮಾರಸ್ವಾಮಿ ಮಿನರಲ್ ಪ್ರೆÊ. ಲಿ. ನ ಎಜಿಎಂ. ವೈ.ಎಂ.ಮಹೇಶ, ಕಾಲೇಜಿನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಜೀವನದಲ್ಲಿ ಉನ್ನತ ಸ್ಥಾನಕ್ಕೇರಿ, ತಮ್ಮ ಪೋಷಕರ ಕನಸುಗಳನ್ನು ಸಾಕಾರಗೊಳಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ವೈ.ಎಂ.ಉಮಾಶAಕರ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬಹುರಾಷ್ಟಿçÃಯ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ದೇಶ- ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದಾರೆ. ಮೈನಿಂಗ್ ವಿಶ್ವವ್ಯಾಪಿ ಬೇಡಿಕೆಯಿದ್ದು, ನುರಿತ ತಂತ್ರಜ್ಞರು, ಹೆಚ್ಚಿನ ಕೌಶಲ್ಯ ಹೊಂದಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಬಹರಾಷ್ಟಿçÃಯ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆ ಮೇಲೆ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಟಿ. ನಜಿರುದ್ದೀನ್, ಆಟೋಮೊಬೈಲ್ ವಿಭಾಗದ ಮುಖ್ಯಸ್ಥ ಧನಂಜಯ್,
ಪ್ರಾಚಾರ್ಯ ವೈ.ಎಂ.ಉಮಾಶAಕರ್, ಶ್ರೀ ಕುಮಾರಸ್ವಾಮಿ ಮಿನರಲ್ ಪ್ರೆÊ.ಲಿ. ನ ಮಾನವ ಸಂಪನ್ಮೂಲ ಅಧಿಕಾರಿ ಮಾಲತಿ ಕರ್ಕಿ, ಟಿ.ಎಂ.ಎ.ಇ. ಎಸ್ ಸಂಸ್ಥೆಯ ಉಪಕಾರ್ಯದರ್ಶಿ ಟಿ.ಎಂ.ವಿಜಯಕುಮಾರ್, ಮೈನಿಂಗ್ ಮತ್ತು ಮೆಟಲರ್ಜಿ ವಿಭಾಗದ ಮುಖ್ಯಸ್ಥ ಟಿ. ಎಲ್. ಯೋಗಾನಂದ ಇದ್ದರು.