ಲ್ಯಾಂಡ್ ಟ್ರೇಡ್ಸ್ ನಕ್ಷತ್ರದಲ್ಲಿ ಕ್ಲಬ್‌ಹೌಸ್ ಉದ್ಘಾಟನೆ, ಫಿಟ್ನೆಸ್ ಸುಧಾರಣೆ ಸಹಿತ ಉತ್ತಮ ಆರೋಗ್ಯಕ್ಕಾಗಿ ಹುರುಪು ಎಂದ ರೂಪೇಶ್ ಶೆಟ್ಟಿ

land
ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ನ ನೂತನ ಯೋಜನೆ ನಕ್ಷತ್ರದಲ್ಲಿ ಕ್ಲಬ್‌ಹೌಸನ್ನು ರೂಪೇಶ್ ಶೆಟ್ಟಿ ಉದ್ಘಾಟಿಸಿದರು. ಲ್ಯಾಂಡ್ ಟ್ರೇಡ್ಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಾಥ್ ಹೆಬ್ಬಾರ್ ಮತ್ತು ಕಟ್ಟಡದ ನಿವಾಸಿಗಳು ಉಪಸ್ಥಿತರಿದ್ದರು.
Published on

ಮಂಗಳೂರು: ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ನ ಸೆಲೆಬ್ರಿಟಿ ಬ್ರಾಂಡ್ ಅಂಬಾಸಿಡರ್ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಬುಧವಾರ ಮಣ್ಣಗುಡ್ಡದಲ್ಲಿ ಸಂಸ್ಥೆಯ ನೂತನ ಯೋಜನೆ ‘ನಕ್ಷತ್ರ’ದಲ್ಲಿ ಕ್ಲಬ್‌ಹೌಸನ್ನು ಲ್ಯಾಂಡ್ ಟ್ರೇಡ್ಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಾಥ್ ಹೆಬ್ಬಾರ್ ಮತ್ತು ಕಟ್ಟಡದ ನಿವಾಸಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು.

ಈ ಅತ್ಯಾಧುನಿಕ ಹವಾನಿಯಂತ್ರಿತ ಕ್ಲಬ್‌ಹೌಸ್ ಆಧುನಿಕ ಜಿಮ್ ಸಾಧನಗಳನ್ನು ಹೊಂದಿದ್ದು, ಇಲ್ಲಿನ ನಿವಾಸಿಗಳಿಗೆ ಹೊಸ ವರ್ಷವನ್ನು ಆರೋಗ್ಯಕರ ಜೀವನ ಶೈಲಿಯೊಂದಿಗೆ ಪ್ರಾರಂಭಿಸಲು ಹೊಸ ಹುರುಪು ತುಂಬಿದೆ ಎಂದು ರೂಪೇಶ್ ಶೆಟ್ಟಿ ಹೇಳಿದರು.

ಇಲ್ಲಿ ಯೋಗ ಮತ್ತು ಧ್ಯಾನ ಕೊಠಡಿ, ಟೇಬಲ್ ಟೆನಿಸ್ ಕೊಠಡಿ, ಚೆಸ್ ಮತ್ತು ಕೇರಂ ಕೊಠಡಿ ಕೂಡ ಇದೆ. ನಿವಾಸಿಗಳು ತಮ್ಮ ಫಿಟ್ನೆಸ್ ಸುಧಾರಿಸಲು ಮತ್ತು ಉತ್ತಮ ಆರೋಗ್ಯ ಆನಂದಿಸಲು ಸಂಪೂರ್ಣವಾಗಿ ಸುಸಜ್ಜಿತವಾಗಿರುವ ಈ ಸುಂದರ, ಹೊಸ ಸೌಲಭ್ಯವನ್ನು ಉದ್ಘಾಟಿಸಲು ರೋಮಾಂಚನಗೊಂಡಿದ್ದೇನೆ ಎಂದು ತಿಳಿಸಿದರು.

ಪ್ರೀಮಿಯಂ ವಸತಿ ಯೋಜನೆ

ನಕ್ಷತ್ರವು ಗಾಂಧಿನಗರ, 8ನೇ ಅಡ್ಡರಸ್ತೆಯಲ್ಲಿರುವ ಲ್ಯಾಂಡ್ ಟ್ರೇಡ್ಸ್‌ನ ಪ್ರೀಮಿಯಂ ವಸತಿ ಯೋಜನೆಯಾಗಿದೆ. ಭವ್ಯವಾದ 15 ಅಂತಸ್ತಿನ ಕಟ್ಟಡ 2 ಬಿಎಚ್‌ಕೆ, 3 ಬಿಎಚ್‌ಕೆ ಮತ್ತು 4 ಬಿಎಚ್‌ಕೆ ಪ್ರಕಾರದ ಸಂಯೋಜನೆಯೊಂದಿಗೆ 52 ಫ್ಲಾೃಟ್‌ಗಳನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಡಿಡಿಡಿ ್ಝಚ್ಞಠ್ಟಿಛಿ.ಜ್ಞಿ ಗೆ ಭೇಟಿ ನೀಡಿ ಅಥವಾ 8882777444 ಅನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net