ನಂಚಾರು ಶಾಲೆಯಲ್ಲಿ 6-8ನೇ ತರಗತಿ ಉದ್ಘಾಟನೆ

kon (2)
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ನಂಚಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉನ್ನತ್ತೀಕರಣಗೊಂಡ 6-8ನೇ ತರಗತಿಗಳನ್ನು ಶಾಸಕ ಯಶ್‌ಪಾಲ್ ಎ.ಸುವರ್ಣ ಉದ್ಘಾಟಿಸಿದರು. ನಾಲ್ಕೂರು ಗ್ರಾಪಂ ಅಧ್ಯಕ್ಷೆ ಶೋಭಾ ಅಧ್ಯಕ್ಷತೆ ವಹಿಸಿದ್ದರು.

ಮುಂಬಯಿನ ನೋಸಿಲ್ ಲಿಮಿಟೆಡ್ ಕಂಪೆನಿ ಸಿಎಸ್‌ಆರ್ ನಿಧಿಯಿಂದ ನೀಡಿದ 3,10,350 ರೂ. ಮೌಲ್ಯದ ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್‌ಗಳು, ಕಂಪ್ಯೂಟರ್ ಕೊಠಡಿ, ಶಾಲಿನಿ ಚಿದಂಬರ ಬಂಡಿಗೇಡಿ ನೀಡಿದ ಕಂಪ್ಯೂೂಟರ್, ಲಕ್ಷ್ಮೀನಾರಾಯಣ ಅಡಿಗ ನಂಚಾರು ನೀಡಿದ ವಾಚನಾಲಯ ಕಪಾಟು, ಸುಮಿತ್ರಾ ನಂಚಾರು ನೀಡಿದ ಕಥಾ ಪುಸ್ತಕಗಳು, ನಾಲ್ಕೂರು ಗ್ರಾಪಂ ವತಿಯಿಂದ ನೀಡಲಾದ 40,000 ರೂ. ಮೌಲ್ಯದ ಕ್ರೀಡಾ ಪರಿಕರಗಳನ್ನು ಹಸ್ತಾಂತರಿಸಲಾಯಿತು.

ಕಲಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಖುಷಿ, ದ್ವಿತೀಯ ಸ್ಥಾನ ಪಡೆದ ಮೇಶ್ರೀ, ತೃತೀಯ ಸ್ಥಾನ ಪಡೆದ ಆದರ್ಶ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಿಪಂ ನಿಕಟಪೂರ್ವ ಸದಸ್ಯ ಪ್ರತಾಪ್ ಹೆಗ್ಡೆ ವಾರಾಳಿ, ಗ್ರಾಪಂ ಉಪಾಧ್ಯಕ್ಷೆ ರತ್ನಾ, ಸದಸ್ಯರಾದ ಸತೀಶ ಶೆಟ್ಟಿ ನಂಚಾರು ಸಪ್ತಬೆಳಾರು, ಸುಮಿತ್ರಾ, ಸತೀಶ್ ಪೂಜಾರಿ ಚಪ್ಪಾರು, ಶಿಕ್ಷಣ ಇಲಾಖೆಯ ಬಿಆರ್‌ಪಿ ಉದಯ್ ಕೋಟ, ಸಿಆರ್‌ಪಿ ಪ್ರತಿಭಾ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಆಚಾರ್ಯ, ಶಾಲಾ ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ರಾಮಮೂರ್ತಿ ಅಡಿಗ, ಹಿರಿಯರಾದ ಲಕ್ಷ್ಮೀನಾರಾಯಣ ಅಡಿಗ, ಶಾಲಾ ವಾರ್ಷಿಕೋತ್ಸವ ವಾಹನ ನಿರ್ವಹಣಾ ಸಮಿತಿ ಅಧ್ಯಕ್ಷ ಪ್ರಸಾದ್ ಹೆಗ್ಡೆ ನಂಚಾರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ದೀಪಾ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಅನಿಲ್ ಭಂಡಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net