ಮಕ್ಕಳಲ್ಲಿದೆ ಅದ್ಭುತವಾದ ಶಕ್ತಿ

5BK2
ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆಯಲ್ಲಿ ಶನಿವಾರ ಸಂಜೆ ನಡೆದ ಮಕ್ಕಳ ಸಮಾವೇಶವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿÀ ಗುರುರಾಜ ಉದ್ಘಾಟಿಸಿದರು. ಶ್ರೀ ಶಿವಲಿಂಗ ಮಹಾಸ್ವಾಮೀಜಿ, ಪೂಜ್ಯ ಡಾ.ಗಂಗಾAಬಿಕಾ ಅಕ್ಕ, ಎಇಇ ಮಲ್ಲಿಕಾರ್ಜುನ ಮೋಳಕೇರಿ, ಗೌರಿಶಂಕರ ಹಾಗೂ ಮಕ್ಕಳು ಇದ್ದರು.
Published on

ಬಸವಕಲ್ಯಾಣ: ಧರ್ಮವೂ ಜೀವನದಲ್ಲಿ ಸನ್ಮಾರ್ಗದಲ್ಲಿ ಸಾಗಲು ಕಲಿಸುತ್ತದೆ. ನೈತಿಕ ತಳಹದಿಯ ಮೇಲೆ ಸಮಾಜವನ್ನು ಮುನ್ನೆಡೆಸುವ ಮಹತ್ತರ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ಬೀದರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ ಹೇಳಿದರು.

ಹರಳಯ್ಯನವರ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆಯಲ್ಲಿ ಶನಿವಾರ ಸಂಜೆ ನಡೆದ ಮಕ್ಕಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಅದ್ಬುತವಾದ ಶಕ್ತಿ ಹಾಗೂ ಪ್ರತಿಭೆ ಇರುತ್ತದೆ. ಇದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯಬೇಕು. ಜತೆಗೆ ಉತ್ತಮ ಸಂಸ್ಕಾರ ನೀಡಬೇಕು. ಎಳೆಯ ಮನಸ್ಸುಗಳಿಗೆ ವಚನಗಳು ಮುಟ್ಟಿಸುವಂತಹ ಇಂತಹ ಕಾರ್ಯಗಳು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ನೇತೃತ್ವ ವಹಿಸಿದ್ದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಒಂದು ದೇಶದ ನಿಜವಾದ ಸಂಪತ್ತೆಂದರೆ ಆ ದೇಶದ ನೆಲಜಲ ಅಷ್ಟೇ ಅಲ್ಲ. ಆ ದೇಶದ ಜನಾಂಗ, ಸಂಸ್ಕಾರ ಭರಿತವಾದ ಜನಾಂಗವೇ ದೇಶದ ನಿಜವಾದ ಸಂಪತ್ತು. ನಮ್ಮನ್ನು ನೋಡಿ ಮಕ್ಕಳು ಅನುಕರಿಸುವುದರಿಂದ ನಮ್ಮ -ನಡೆ ಒಂದಾಗಿರಬೇಕು. ಇದರಿಂದ ಸದೃಢ ಸಮಾಜ, ಸುಭದ್ರ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಇಇ ಮಲ್ಲಿಕಾರ್ಜುನ ಮೋಳಕೇರಿ ಮಾತನಾಡಿದರು. ಖೇಳಗಿಯ ಶ್ರೀ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಬಸವಕಲ್ಯಾಣದ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಇತರರಿದ್ದರು. ಇಶಿತಾ ಶಾಶೆಟ್ಟಿ ಧ್ವಜಾರೋಹಣ, ಆರಾಧ್ಯ ಸ್ವಾಗತ, ಸೃಷ್ಟಿ ರಾಜೋಳೆ ನಿರೂಪಣೆ ಮಾಡಿದರು. ಸಕಲೇಶ ಹೂಗಾರ ಧ್ವಜ ಗೀತೆ ಹಾಡಿದರು. ಜ್ಞಾನಭಾರತಿ ಪ್ರಾಥಮಿಕ ಶಾಲೆ ಮಕ್ಕಳಿಂದ ಜಾನಪದ ನೃತ್ಯ ಜರುಗಿದವು. ಶಿಲ್ಪಾ ಸಂತೋಷ ಶೆರಿಕಾರ ಭಕ್ತಿ ದಾಸೋಹಗೈದರು.

ಗಮನ ಸೆಳೆದ ಮಕ್ಕಳ ಮಾತು: ಮಕ್ಕಳ ಸಮಾವೇಶದಲ್ಲಿ ಬಸವಣ್ಣವರ ಹಾಗೂ ಅಕ್ಕಮಹಾದೇವಿ ಚರಿತ್ರೆ, ಪ್ರಾಣಲಿಂಗ, ಅಷ್ಠಾವರಣ, ಪಂಚಾಚಾರ, ಷಟಸ್ಥಲ, ಕಾಯಕ, ದಾಸೋಹ ಮುಂತಾದ ವಿಷಯಗಳ ಕುರಿತು ಮಕ್ಕಳು ಮಾಡಿದ ಭಾಷಣ ಗಮನ ಸೆಳೆಯಿತು. ಬಸವ ಶೇರಿಕಾರ, ವಿರೇಶ ಸ್ವಾಮಿ, ಸಾಕ್ಷಿ, ಪ್ರೀತಿ, ಸಾಕ್ಷಿ ರಗಟೆ, ಅಕ್ಷತಾ, ಶಶಾಂಕ, ಶರಣು ಮಕ್ಕಳು ವಿಷಯ ಕುರಿತು ಉಪನ್ಯಾಸ ಮಂಡಿಸಿದರು. ರಂಜನಾ ಭೂಶೆಟ್ಟಿ ಮಾರ್ಗದರ್ಶನದಲ್ಲಿ ಮಕ್ಕಳಿಂದ ನಡೆದ ಸಾಮೂಹಿಕ ವಚನ ಗಾಯನ ಹಾಗೂ ಪ್ರೀತಿ, ಸ್ಪೂರ್ತಿ, ಆರಾಧ್ಯ, ತ್ರಿಷಾ ಸಂಗಡಿಗರಿಂದ ನಡೆದ ವಚನ ನೃತ್ಯ ಗಮನ ಸೆಳೆಯಿತು. ಮಹೇಶ, ಕಾರ್ತಿಕ, ಗಣೇಶ, ಅಶುತೋಷ ಸಂಗಡಿಗರಿಂದ ಭೂಮಿ ತಾಯಿ ನಾಟಕ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net