ಶಾಲಾಭಿವೃದ್ಧಿ ಸಮಿತಿ ಕಾಳಜಿಯಿಂದ ಸಹಕಾರ : ಮುಸ್ತಫಾ ಮಲಾರ್ ಹೇಳಿಕೆ

New Project (26)
Published on

ಉಳ್ಳಾಲ: ಹಿರಿಯರು ತಟ್ಟಿ ಹಾಕಿ ಆರಂಭಿಸಿದ ಶಾಲೆ ಒಂದು ಆಂಗ್ಲಮಾಧ್ಯಮವಾಗಿ ಅಭಿವೃದ್ಧಿ ಕಂಡಿದೆ, ಶಾಲಾಭಿವೃದ್ಧಿ ಸಮಿತಿ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದಾಗ ಜನಪ್ರತಿನಿಧಿಗಳೂ ಸಹಕಾರ ನೀಡಲು ಸಾಧ್ಯ, ಗ್ರಾಮದಲ್ಲಿ ಎರಡು ಸರ್ಕಾರಿ ಶಾಲೆಗಳಿದ್ದು ಎರಡಕ್ಕೂ ಆಂಗ್ಲಮಾಧ್ಯಮ ಶಾಲೆಗೆ ಅನುಮೋದನೆ ಸಿಕ್ಕಿರುವುದು ಶಾಸಕರಿಗೆ ಗ್ರಾಮದ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ ಎಂದು ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಮಲಾರ್ ಹೇಳಿದರು.

ಮುಖ್ಯಮಂತ್ರಿಯ ವಿಶೇಷ ಅನುದಾನದಡಿ ಹರೇಕಳ ಗ್ರಾಪಂ ವ್ಯಾಪ್ತಿಯ ರಾಜಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎರಡು ಕೊಠಡಿಗಳ ಕೆಲಸಕ್ಕೆ ಶುಕ್ರವಾರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹರೇಕಳ ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಮಾತನಾಡಿ, ಮುಖ್ಯಮಂತ್ರಿಯ ವಿಶೇಷ ಅನುದಾನದಲ್ಲಿ ಹತ್ತು ಶಾಲಾ ಕೊಠಡಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಎಲ್ಲವೂ ಉಳ್ಳಾಲ ಕ್ಷೇತ್ರಕ್ಕೆ ಬಂದಿದ್ದು ಶಾಸಕ ಯು.ಟಿ.ಖಾದರ್ ಅವರಿಗೆ ಶಿಕ್ಷಣದ ಮೇಲಿರುವ ಮುತುವರ್ಜಿ ತೋರಿಸುತ್ತದೆ ಎಂದರು.

‘ಚಿಗುರು’ ಇಕೋ ಕ್ಲಬ್ ಉದ್ಘಾಟಿಸಲಾಯಿತು. ಹರೇಕಳ ಗ್ರಾಪಂ ಅಧ್ಯಕ್ಷೆ ಗುಲಾಬಿ ಶಿಲಾನ್ಯಾಸಗೈದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಖಾಲಿದ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಬಶೀರ್ ಉಂಬುದ, ಸದಸ್ಯರಾದ ಅನೀಸ್, ಹನೀಫ್, ರೆಹನಾ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಜೈಬುನ್ನಿಸಾ, ಸದಸ್ಯರಾದ ಸಮೀರ, ಶೃತಿ, ತಾಹಿರಾ, ರಜಿಯಾ, ಧನಲಕ್ಷ್ಮೀ, ಜುಬೈದಾ ಮಹಮ್ಮದ್ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಗೀತಾ ಸ್ವಾಗತಿಸಿದರು. ಚಂಚಲಾಕ್ಷಿ ವಂದಿಸಿದರು. ಶಿಕ್ಷಕಿ ಶೋಭಾ ನಿರೂಪಿಸಿದರು.

ಹರೇಕಳ ಗ್ರಾಮದ ಮೂಲೆಯಲ್ಲಿರುವ ರಾಜಗುಡ್ಡೆ ಶಾಲೆಯಲ್ಲಿ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಅನುಮೋದನೆ ಸಿಕ್ಕಿದ್ದು ಈ ಶಾಲೆ ಉಳಿಯಬೇಕಾದರೆ ಮಕ್ಕಳ ಸಂಖ್ಯೆ ಹೆಚ್ಚಬೇಕಿದ್ದು ಪಾಲಕರ ಸಹಕಾರ ಅಗತ್ಯ. ಬಶೀರ್ ಉಂಬುದ, ಮಾಜಿ ಅಧ್ಯಕ್ಷ, ಶಾಲಾಭಿವೃದ್ಧಿ ಸಮಿತಿ https://www.vijayavani.net/fraud-case-6 https://www.vijayavani.net/tobacco-product-seized-accused-arrested

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net