ಕಾಟಿಪಳ್ಳದಲ್ಲಿ ಬಸ್ ತಂಗುದಾಣ ಉದ್ಘಾಟನೆ

New Project (2)
Published on

ಗುರುಪುರ: ಮಂಗಳೂರು ಮಹಾನಗರ ಪಾಲಿಕೆಯ ಕಾಟಿಪಳ್ಳ 3ನೇ ವಾರ್ಡ್‌ನ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಅವರ ಪಾಲಿಕೆ ನಿಧಿ ಹಾಗೂ ಓಕೆ ಫ್ರೆಂಡ್ಸ್ ಸಹಕಾರದಲ್ಲಿ ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗ ನಿರ್ಮಿಸಲಾದ ಸುಸಜ್ಜಿತ ಬಸ್ ತಂಗುದಾಣವನ್ನು ಭಾನುವಾರ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪಾಲಿಕೆಯ 3ನೇ ವಾರ್ಡ್‌ನಲ್ಲಿ 5 ವರ್ಷಗಳ ಅವಧಿಯಲ್ಲಿ 7 ಕೋಟಿ ರೂ.ಗೂ ಅಧಿಕ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಜಲಸಿರಿ ಯೋಜನೆ ಜಾರಿಯಾದರೆ ದಿನದ 24 ತಾಸು ನೀರು ಲಭಿಸಲಿದೆ. ಬಿಜೆಪಿ ಆಡಳಿತ ರಸ್ತೆ, ಒಳಚರಂಡಿ, ಮಳೆ ನೀರು ಹರಿಯುವ ತೋಡು, ಡಾಂಬರು ರಸ್ತೆ ಸಹಿತ ಮೂಲಸೌಕರ್ಯ ಒದಗಿಸುವಲ್ಲಿ ಒತ್ತು ನೀಡಿದೆ ಎಂದರು.

ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಅವರನ್ನು ಶಾಸಕರು ಸನ್ಮಾನಿಸಿದರು. ಮೇಯರ್ ಮನೋಜ್ ಕುವಾರ್, ಕಾರ್ಪೋರೇಟರ್ ಸರಿತಾ ಎಸ್., ಉತ್ತರ ಮಂಡಲ ಸಹಕಾರಿ ಭಾರತಿ ಪ್ರಕೋಷ್ಟ ಅಧ್ಯಕ್ಷ ಅಶೋಕ್ ಶೆಟ್ಟಿ, ವಾರ್ಡ್ ಅಧ್ಯಕ್ಷ ಶಾಂತ ಕುವಾರ್, ಉದ್ಯಮಿ ಪುರುಷೋತ್ತಮ ಬಂಗೇರ, ಮೂಡುಬಿದಿರೆ ಉಪತಹಸೀಲ್ದಾರ್ ರಾಮ ಕೆ., ಸುಧೀರ್, ಆದಿಶಕ್ತಿ ಕ್ಷೇತ್ರದ ಮೊಕ್ತೇಸರ ಪ್ರದೀಪ್ ಕುಲಾಲ್, ಗಿರೀಶ್, ಓಕೆ ಫ್ರೆಂಡ್ಸ್ ಅಧ್ಯಕ್ಷ ಉಮೇಶ್ ಪೂಜಾರಿ, ಉತ್ತರ ಮಂಡಲ ಎಸ್‌ಸಿ ಮೋರ್ಚಾದ ವಿಭಾಗ ಅಧ್ಯಕ್ಷೆ ಹರೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net