ಸ್ಕೌಟ್ಸ್​-ಗೈಡ್ಸ್​ ಚಿಣ್ಣರು ಶ್ರೀಕೃಷ್ಣನ ಮಿತ್ರರು...

Bul Bul
Published on

ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ

ಜಿಲ್ಲಾ ಮಟ್ಟದ ಕ್ಲಬ್​ ಬುಲ್​ ಬುಲ್​ ಉತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೀಕೃಷ್ಣನಿಗೆ ಮಕ್ಕಳೆಂದರೆ ಬಹಳ ಪ್ರೀತಿ. ತನ್ನ ಬಾಲ್ಯದ ಸಂಗಡಿಗರೊಂದಿಗೆ ಬಾಲಲೀಲೆಗಳ ಮುಖಾಂತರ ಎಲ್ಲರ ಮನ ಸೆಳೆದವನು. ಸ್ಕೌಟ್ಸ್​ ಮತ್ತು ಗೈಡ್ಸ್​ ಮಕ್ಕಳೂ ಸಹ ಶ್ರೀಕೃಷ್ಣನ ಗೆಳೆಯರಿದ್ದಂತೆ. ಆತನ ಅಂಗಳದಲ್ಲಿ ಕ್ಲಬ್​ನ ಬುಲ್​ ಬುಲ್​ ಮಕ್ಕಳು ಪ್ರತಿಭೆ ಪ್ರದರ್ಶಿಸುವ ಮೂಲಕ ಕೃಷ್ಣ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಾಜಾಂಗಣದಲ್ಲಿ ಭಾರತೀಯ ಸ್ಕೌಟ್ಸ್​ ಮತ್ತು ಗೈಡ್ಸ್​ನ ಜಿಲ್ಲಾ ಕ್ಲಬ್​ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬುಲ್​ ಬುಲ್​ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮಕ್ಕಳ ಪ್ರತಿಭೆಗೆ ವೇದಿಕೆ

ಸ್ಕೌಟ್ಸ್​ ಮತ್ತು ಗೈಡ್ಸ್​ನ ಜಿಲ್ಲಾ ಮುಖ್ಯ ಆಯುಕ್ತ ಜಯಕರ್​ ಶೆಟ್ಟಿ ಇಂದ್ರಾಳಿ ಮಾತನಾಡಿ, ಜಿಲ್ಲೆಯಲ್ಲಿ ಸ್ಕೌಟ್ಸ್​ ಮತ್ತು ಗೈಡ್ಸ್​ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರಲ್ಲಿರುವ ಪ್ರತಿಭೆ ಹೊರ ತರುವುದು ಈ ಉತ್ಸವದ ಉದ್ದೇಶವಾಗಿದೆ. ಇದೊಂದು ಸ್ಕೌಟಿಂಗ್​ ಚಳವಳಿಯಾಗಿದೆ ಎಂದರು.

ಜಿಲ್ಲಾ ಸ್ಕೌಟ್​ ಅಯುಕ್ತ ಜನಾರ್ದನ್​ ಕೊಡವೂರು, ಜಿಲ್ಲಾ ಉಪಾಧ್ಯಕ್ಷ ಎಡ್ವಿನ್​ ಆಳ್ವ, ಜಿಲ್ಲಾ ಕಾರ್ಯದರ್ಶಿ ಆನಂದ್​ ಬಿ. ಅಡಿಗ, ಜಿಲ್ಲಾ ತರಬೇತಿ ಆಯುಕ್ತ ಉದಯ್​ ಬಿ. ಶೆಟ್ಟಿ, ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸುಜಾತಾ ಶೆಟ್ಟಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನಾಶೇಖರ್​, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಇತರರು ಉಪಸ್ಥಿತರಿದ್ದರು.

ಕ್ಲಬ್​ನ ಬುಲ್​ ಬುಲ್​ ಉತ್ಸವದಲ್ಲಿ ಮಕ್ಕಳಿಗೆ ವಿವಿಧ ತರಬೇತಿ, ಮಾಹಿತಿ, ಆಟೋಟ ಮುಂತಾದ ಮನರಂಜನಾ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net