ಎಡರಂಗ ಸರ್ಕಾರದಿಂದ ಎಲ್ಲ ವಲಯಗಳ ಅಭಿವೃದ್ಧಿ : ಸಚಿವ ಒ.ಆರ್.ಕೇಳು ಅಭಿಪ್ರಾಯ

New Project (7)
Published on

ಕಾಸರಗೋಡು: ಕೇರಳ ಸರ್ಕಾರ ಎಲ್ಲ ವಲಯಗಳಲ್ಲಿ ಅಭಿವೃದ್ಧಿ ಸಾಧ್ಯವಾಗಿಸಿರುವುದಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆ ಸಚಿವ ಒ.ಆರ್.ಕೇಳು ಹೇಳಿದರು.

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಂಗವಾಗಿ ನೀಲೇಶ್ವರ ಚಿರಪ್ಪುರಂನಲ್ಲಿ ನಿರ್ಮಿಸಲಾಗಿರುವ ಬಡ್ಸ್ ಶಾಲೆಯ ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಇಂಜಿನಿಯರ್ ಪಿ.ಸಾಜು ವರದಿ ಮಂಡಿಸಿದರು. ನೀಲೇಶ್ವರ ನಗರಸಭಾ ಉಪಾಧ್ಯಕ್ಷ ಪಿ.ಪಿ.ಮಹಮ್ಮದ್ ರಫಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ರವೀಂದ್ರನ್, ಶಂಸುದ್ದೀನ್ ಅರಿಂಜಿರ, ವಿ.ಗೌರಿ, ಲತಾ, ಪಿ.ಭಾರ್ಗವಿ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ವಿ.ಚಂದ್ರನ್, ಕೌನ್ಸಿಲರ್‌ಗಳಾದ ಇ.ಅಶ್ವತಿ, ಕೆ.ಜಯಶ್ರೀ, ದಾಕ್ಷಾಯಣಿ ಕುಞಿಕಣ್ಣನ್, ವಿ.ವಿ.ಶ್ರೀಜಾ ಮೊದಲಾದವರಿದ್ದರು. ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ ಸ್ವಾಗತಿಸಿದರು. ನಗರಸಭಾ ಕಾರ್ಯದರ್ಶಿ ಕೆ.ಮನೋಜ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net