

ಮಂಗಳೂರು: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ಶಾಖೆಯ ವತಿಯಿಂದ ಮಾ.3 ಸಂಜೆ 6 ಗಂಟೆಗೆ ಶ್ರೀಕ್ಷೇತ್ರ ಕುದ್ರೋಳಿಯ ಸಮೀಪದ ಮೈದಾನದಲ್ಲಿ ಕುಂಭಕರ್ಣ ದೃಶ್ಯ ರೂಪಕ, ಸಹಸ್ರ ಲಿಂಗ ದರ್ಶನ ಹಾಗೂ ಸೃಷ್ಟಿ ಚಕ್ರ ರಹಸ್ಯ ಮುಂತಾದ ವಿಶೇಷ ಆಕರ್ಷಣೆಗಳ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಈ ಪ್ರದರ್ಶನದಲ್ಲಿ ಶಿವಧ್ಯಾನ ಕುರಿತಾಗಿ ಮಾಹಿತಿಯನ್ನು ನೀಡಲಾಗುತ್ತದೆ. ಮಾ.3 ರಿಂದ 10 ರವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 8 ಘಂಟೆಯವರೆಗೆ ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶಿಸಲಾಗುತ್ತದೆ. ಕುಂಭಕರ್ಣ ದೃಶ್ಯ ರೂಪಕ ಪ್ರದರ್ಶನದ ಉದ್ಘಾಟನೆ ಶ್ರೀ ಈಶ ವಿಶ್ವಲದಾಸ ಸ್ವಾಮೀಜಿ ಮಾಡಲಿದ್ದಾರೆ. ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೋಳಿ ಇದರ ಟ್ರಸ್ಟಿ ರವಿಶಂಕರ್ ಮಿಜಾರ್, ಪತ್ರಕರ್ತ ಪರಮಾನಂದ ಸಾಲ್ಯಾನ್ ಉಪಸ್ಥಿತರಿರುವರು. ಈಶ್ವರೀಯ ಸಂದೇಶವನ್ನು ರಾಜಯೋಗಿನಿ ಬ್ರಹ್ಮಾಕುಮಾರಿ ವಿಶ್ವೇಶ್ವರಿ, ಸಂಚಾಲಕರು ಬ್ರಹ್ಮಾಕುಮಾರೀಸ್ ಮಂಗಳೂರು ಇವರು ನೀಡಲಿದ್ದಾರೆ ಎಂದು ಬ್ರಹ್ಮಾಕುಮಾರೀಸ್ ಮಂಗಳೂರು ಇದರ ಸಂಚಾಲಕರಾದ ಬಿ.ಕೆ. ವಿಶ್ವೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880725939 ಸಂಪರ್ಕಿಸುವಂತೆ ಕೋರಲಾಗಿದೆ.