25ರಂದು ಸಾಗರದಲ್ಲಿ ಬಿಲ್ಲವ ಸಮುದಾಯ ಭವನ ಉದ್ಘಾಟನೆ

23sgr2
ಸಾಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಎಸ್.ಕೆ.ಚಂದ್ರು ಕರ್ಕಿಕೊಪ್ಪ ಮಾತನಾಡಿದರು.
Published on

ಸಾಗರ: ಇಕ್ಕೇರಿ ರಸ್ತೆಯ ಆದಿಶಕ್ತಿ ನಗರದಲ್ಲಿರುವ ತಾಲೂಕು ಬಿಲ್ಲವ ಸಂಘದ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದ ಉದ್ಘಾಟನೆಯನ್ನು ಸೆ.25ರ ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರು ಕರ್ಕಿಕೊಪ್ಪ ಹೇಳಿದರು.

ಸಾನ್ನಿಧ್ಯವನ್ನು ಧರ್ಮಸ್ಥಳ ನಿತ್ಯಾನಂದ ನಗರ ಶ್ರೀರಾಮಕ್ಷೇತ್ರ ಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಕೋಟ ಶ್ರೀನಿವಾಸ ಪೂಜಾರಿ, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರದ 1 ಕೋಟಿ ರೂ. ಅನುದಾನ ಹಾಗೂ ಸಮುದಾಯದಿಂದ 1.50 ಕೋಟಿ ರೂ. ಸಂಗ್ರಹಿಸಿ 2.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಗೌರವಾಧ್ಯಕ್ಷ ಎಲ್.ನಾಗರಾಜ್, ಉಪಾಧ್ಯಕ್ಷರಾದ ನಾಗರಾಜ ಗೀಜಗಾರು, ಬಿ.ಎಸ್.ಸುಂದರ್, ರಾಜು ಬೇಸೂರು, ಎನ್.ಮಂಜು, ಗಣಪತಿ, ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net