ಮುಗಳೂರಿನಲ್ಲಿ ಬಣ್ಣಾರಿ ಅಮ್ಮನವರ ದೇಗುಲ ಉದ್ಘಾಟನೆ

IMG-20251023-WA0183
ಅರಕಲಗೂಡು ತಾಲೂಕು ಮುಗಳೂರು ಗ್ರಾಮದಲ್ಲಿ ವಿಘ್ನೇಶ್ವರ ಪ್ರತಿಷ್ಠಾಪನೆ ಹಾಗೂ ಬಣ್ಣಾರಿ ಅಮ್ಮನವರ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಎ.ಮಂಜು, ಮುಖಂಡರಾದ ಎಂ.ಟಿ. ಪಾಂಡುರಂಗ, ಕೃಷ್ಣೇಗೌಡ, ಗೋವಿಂದೇಗೌಡ, ಪಟೇಲ್ ಮಂಜುನಾಥ್ ಇತರರು ಇದ್ದರು.
Published on

ಅರಕಲಗೂಡು: ತಾಲೂಕಿನ ಮುಗಳೂರು ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ವಿಘ್ನೇಶ್ವರ ಪ್ರತಿಷ್ಠಾಪನೆ ಹಾಗೂ ಶ್ರೀ ಬಣ್ಣಾರಿ ಅಮ್ಮನವರ ದೇವಾಲಯವನ್ನು ಉದ್ಘಾಟಿಸಲಾಯಿತು.

ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ಭಕ್ತರಿಗೆ ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.

ಶಾಸಕ ಎ.ಮಂಜು, ಮುಖಂಡರಾದ ಎಂ.ಟಿ. ಪಾಂಡುರಂಗ, ಕೃಷ್ಣೇಗೌಡ, ಗೋವಿಂದೇಗೌಡ, ಪಟೇಲ್ ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net