ಬನ್ನಡ್ಕ ಶಾರದೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

New Project (34)
Published on

ಮೂಡುಬಿದಿರೆ: ಬನ್ನಡ್ಕ ಸಾರ್ವಜನಿಕ ಶ್ರೀ ಶಾರದೋತ್ಸವದ ಪ್ರಯುಕ್ತ ನಡೆಯುವ 4ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಲಾಯಿತು.

ಬನ್ನಡ್ಕ ಶ್ರೀ ಶಾರದೋತ್ಸವ ಟ್ರಸ್ಟ್ ಅಧ್ಯಕ್ಷ ದಯಾನಂದ್ ಪೈ ಅಧ್ಯಕ್ಷತೆ ವಹಿಸಿದರು. ಅಲಂಗಾರು ಶ್ರೀಮಹಾಲಿಂಗೇಶ್ವರ ದೇವಳದ ಅರ್ಚಕ ಸುಬ್ರಮಣ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಬೆಳುವಾಯಿ ಗ್ರಾಪಂ ಸದಸ್ಯ ಭರತ್ ಶೆಟ್ಟಿ, ಜೈನ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ಯಾಮ್ ಪ್ರಸಾದ್, ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆಯ ಅಧ್ಯಕ್ಷ ಗುರು, ಪ್ರಮುಖರಾದ ಸತೀಶ್ ಭಟ್, ಸಂಧ್ಯಾ ಸಂದೀಪ್, ಪ್ರೀಕ್ಷಾ, ನಿತಿನ್, ಶಾರದೋತ್ಸವದ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂರಜ್ ಮಾರ್ನಾಡು, ಕೋಶಾಧಿಕಾರಿ ಸಂತೋಷ್ ನಾಯಕ್, ಸಾಂಸ್ಕೃತಿಕ ಉತ್ಸವದ ಸಂಚಾಲಕರಾದ ಮಹೇಶ್ ಹುಲೇಕಲ್, ಸುಕುಮಾರ್ ಬನ್ನಡ್ಕ ಉಪಸ್ಥಿತರಿದ್ದರು. ಪ್ರಸನ್ನ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net