

ಶಿಗ್ಗಾಂವಿ: ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ, ತಾಲೂಕು ಮಟ್ಟದ ಸಮಾವೇಶ ಹಾಗೂ ಶ್ರೀ ಎಡೆಯೂರ ಸಿದ್ಧಲಿಂಗೇಶ್ವರ ಸೌಹಾರ್ದ ಬ್ಯಾಂಕ್ ಉದ್ಘಾಟನೆ ಸಮಾರಂಭ ಪಟ್ಟಣದ ಹನುಮಂತಗೌಡ್ರು ಪಾಟೀಲ ಕಲ್ಯಾಣ ಭವನದಲ್ಲಿ ಸೆ. 22ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಹೆಸರೂರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹಾಗೂ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ, ವಿಜಯಪುರದ ಸಿದ್ಧಾರೂಢಮಠದ ಯೋಗೇಶ್ವರಿ ಮಾತಾಜಿ, ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಜಗದೀಶ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸುವರು. ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಶಿವಾನಂದ ಸೊಬರದ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಧಾರವಾಡ ಕಸಾಪ ತಾಲೂಕಾಧ್ಯಕ್ಷ ಲಿಂಗರಾಜ ಅಂಗಡಿ, ಸಮಾಜದ ಕಿರಣ ಕೊಳ್ಳಿ, ಶಿದ್ಧಲಿಂಗಪ್ಪ ಮಹಾರಾಜಪೇಟ, ಚನ್ನವೀರಪ್ಪ ಶೆಟ್ಟರ, ಚನ್ನವೀರಪ್ಪ ಅಂಗಡಿ, ಕಲ್ಯಾಣಪ್ಪ ಹಂಚಿನ, ಕುಮಾರ ಹತ್ತಿಕಾಳ, ಸಂಗನಬಸಪ್ಪ ಶೆಟ್ಟರ, ಬಸವರಾಜ ನೀರಲಗಿ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದ್ದಾರೆ.