ಸಂಸ್ಕಾರಯುತ ಶಿಕ್ಷಣದಿಂದ ಬದುಕು ಉಜ್ವಲ : ವಿನಯಾ ಬಣ್ಣನೆ

gokula
Published on

ಉಪ್ಪಿನಂಗಡಿ: ಇಲ್ಲಿನ ವೇದಶಂಕರದ ಶ್ರೀ ಮಾಧವ ಶಿಶು ಮಂದಿರದಲ್ಲಿ ಹೊಸದಾಗಿ ಬಾಲಗೋಕುಲ ಸಂಸ್ಕಾರ ಶಿಕ್ಷಣ ಕೇಂದ್ರವನ್ನು ಭಾನುವಾರ ಉದ್ಘಾಟಿಸಲಾಯಿತು. ಶಿಶು ಮಂದಿರದ ಪೋಷಕಿ ವಿನಯಾ ಉದ್ಘಾಟನೆ ನೆರವೇರಿಸಿ ಜೀವನದಲ್ಲಿ ಸಂಸ್ಕಾರ ಶಿಕ್ಷಣ ಅಳವಡಿಸಿಕೊಳ್ಳುವುದರಿಂದ ಬದುಕು ಪ್ರಜ್ವಲಿಸುತ್ತದೆ ಎಂದರು.

ಶಿಶು ಮಂದಿರದ ಆಡಳಿತ ಮಂಡಳಿ ಸದಸ್ಯ ಯು.ರಾಜೇಶ್ ಪೈ, ಶಾಲಾ ಕಾಲೇಜಿನ ಮಕ್ಕಳೂ ಸಂಸ್ಕಾರ ಅಳವಡಿಸಿಕೊಳ್ಳುವ ಮೂಲಕ ಅವರನ್ನು ಸಮಾಜಕ್ಕೆ ಸಂಪತ್ತಾಗಿಸುವಲ್ಲಿ ಬಾಲಗೋಕುಲಗಳು ಪರಿಣಾಮಕಾರಿ ಎಂದರು.

ಜಯಶ್ರೀ ಜನಾರ್ದನ್, ಶಿಶು ಮಂದಿರದ ಆಡಳಿತ ಮಂಡಳಿಯ ಕಂಗ್ವೆ ವಿಶ್ವನಾಥ ಶೆಟ್ಟಿ, ಕರಾಯ ರಾಘವೇಂದ್ರ ನಾಯಕ್, ಉದಯ ಕುಮಾರ್, ಮುಖ್ಯ ಮಾತಾಜಿ ಚೈತ್ರಾ ಕೆಮ್ಮಾರ, ಸಹಾಯಕ ಮಾತಾಜಿ ಚಂದ್ರಾವತಿ ಭಾಗವಹಿಸಿದ್ದರು.

ಬಾಲಗೋಕುಲದ ಪ್ರಮುಖ್ ದೀಕ್ಷಾ ನೇತೃತ್ವ ವಹಿಸಿದ್ದರು. ರಶಿಕಾ ಕಾರ್ಯಕ್ರಮ ನಿರ್ವಹಿಸಿದರು. ಪೂಜಾ ಸ್ವಾಗತಿಸಿದರು. ಶ್ರುತಿ ಅಲಗುರಿಮಜಲು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net