ಶೀಘ್ರ ಅಯ್ಯಪ್ಪಸ್ವಾಮಿ ದೇಗುಲ ಉದ್ಘಾಟನೆ

9.3
Published on

ಹೊಳೆನರಸೀಪುರ: ಹೇಮಾವತಿ ನದಿ ದಡದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅಯ್ಯಪ್ಪಸ್ವಾಮಿ ದೇವಾಲಯದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು ಸದ್ಯದಲ್ಲೇ ಉದ್ಘಾಟಿಸಲಾಗುವುದು ಎಂದು ದೇವಾಲಯ ಸಮಿತಿ ತಿಳಿಸಿದೆ.


ಅಯ್ಯಪ್ಪ ಗರ್ಭಗುಡಿಯ ಮುಂದಿನ ನೆಲಹಾಸನ್ನು ನ್ಯಾಮನಹಳ್ಳಿ ಉದ್ಯಮಿ ಎನ್.ಆರ್.ಅನಂತ್‌ಕುಮಾರ್ ಹಾಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ನೆಲಹಾಸು ಹಾಕಿದ ತಕ್ಷಣ ಅಯ್ಯಪ್ಪಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಿ ದೇವಾಲಯ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಧರ್ಮಶಾಸ್ತ್ರ ಅಯ್ಯಪ್ಪಸ್ವಾಮಿ ಟ್ರಸ್ಟ್ ಖಜಾಂಚಿ ಎಚ್.ಎಸ್. ಸುದರ್ಶನ್ ತಿಳಿಸಿದ್ದಾರೆ.

ಶಾಸಕ ಎಚ್.ಡಿ.ರೇವಣ್ಣ ಅವರು 48 ಲಕ್ಷ ರೂ. ಅನುದಾನ ಕೊಡಿಸಿದ್ದು ಉಳಿದ ಹಣವನ್ನು ಸಾರ್ವಜನಿಕರು, ಅಯ್ಯಪ್ಪ ಭಕ್ತಾದಿಗಳು ನೀಡಿದ್ದಾರೆ. ಎನ್.ಆರ್.ಅನಂತ್ ಕುಮಾರ್ ಅವರು ದೇವಾಲಯ ಕಟ್ಟಡಕ್ಕೆ ಬೇಕಾದ ಜಲ್ಲಿ, ಎಂ ಸ್ಯಾಂಡ್ ಪೂರೈಸಿದ್ದಾರೆ. ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net