ಮಂಜೂಷಾವನ್ನು ಗಿನ್ನೆಸ್‌ಗೆ ಸೇರಿಸಲು ಪ್ರಯತ್ನ : ಡಾ.ಪ್ರದೀಪ್ ಭಾರಧ್ವಾಜ್ ಹೇಳಿಕೆ

New Project (1)
Published on

ಬೆಳ್ತಂಗಡಿ:ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು 50 ವರ್ಷಗಳಲ್ಲಿ ವಿಶೇಷ ಆಸಕ್ತಿ ಮತ್ತು ಕಾಳಜಿ ವಹಿಸಿ ದೇಶದ ಭವ್ಯ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ಅಪೂರ್ವ ಶಾಸನಗಳು, ಕಲಾಕೃತಿಗಳು, ತಾಳೆಗರಿ ಗ್ರಂಥಗಳು, ವಿಂಟೇಜ್ ಕಾರು ಇತ್ಯಾದಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಪ್ರದರ್ಶನಕ್ಕಿಟ್ಟಿರುವುದು ಒಂದು ವಿಶೇಷ ಸಾಧನೆಯಾಗಿದೆ. ಇದು ಇಡೀ ದೇಶಕ್ಕೆ ಹೆಮ್ಮೆ ಹಾಗೂ ಅಭಿಮಾನ ತರುವ ಸಂಗತಿಯಾಗಿದೆ. ಏಕವ್ಯಕ್ತಿಯ ಈ ವಿಶಿಷ್ಟ ಸಾಧನೆ ಮನ್ನಿಸಿ ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ನೀಡಲಾಗಿದೆ ಎಂದು ನವದೆಹಲಿಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಮುಖ್ಯಸ್ಥ ಡಾ.ಪ್ರದೀಪ್ ಭಾರಧ್ವಾಜ್ ಹೇಳಿದರು.

ಶನಿವಾರ ಧರ್ಮಸ್ಥಳದಲ್ಲಿ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ದಂತದ ಶಿಲ್ಪಕಲೆ ಮತ್ತು ಕಲಾಕೃತಿಗಳ ಅದ್ಭುತ ಸಂಗ್ರಹವಿಭಾಗದ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದಂತಶಿಲ್ಪಕಲೆ ಮತ್ತು ಕಲಾಕೃತಿಗಳ ಸಂಗ್ರಹದಲ್ಲಿ ದಂತದ ಕೆತ್ತನೆಯಲ್ಲಿ ರೂಪಿಸಿದ ಶಿವಸಹಸ್ರ ನಾಮ, ಎರಡು ಅಡಿ ಉದ್ದದ ದಂತದ ಮೂರ್ತಿಗಳು, ಅತಿಸೂಕ್ಷ್ಮದ ಆನೆಯ ಕೆತ್ತನೆ ನೂರು ದಂತದ ಆನೆಗಳ ಸಮೂಹ, ಆನೆಯ ದಂತದ ಮೇಲೆ ಕೆತ್ತನೆ ಮಾಡಿದ ವಿಷ್ಣುಪುರಾಣದ ಚಿತ್ರಕಥೆ ಪ್ರೇಕ್ಷಕರ ಕಣ್ಮನ ಸೆಳೆಯುತ್ತವೆ. ಮಂಜೂಷಾವನ್ನು ಗಿನ್ನೆಸ್ ದಾಖಲೆಗೂ ಸೇರಿಸಲು ತಾವು ಪ್ರಯತ್ನಿಸುವುದಾಗಿ ತಿಳಿಸಿದರು. ಎಂದರು. ಮಂಜೂಷಾದ ಕ್ಯುರೇಟರ್ ಪುಷ್ಪದಂತ ಮತ್ತು ರಿತೇಶ್‌ಶರ್ಮ ಉಪಸ್ಥಿತರಿದ್ದರು.

ಡಾ.ಪ್ರದೀಪ್ ಭಾರದ್ವಾಜ್ ತಿಳಿಸಿದಂತೆ ಮಂಜೂಷಾ ವಸ್ತುಸಂಗ್ರಹಾಲಯ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದಲ್ಲಿ ಇನ್ನೂ ಹೆಚ್ಚಿನ ಸಂತೋಷ ಮತ್ತು ಅಭಿಮಾನ ಉಂಟಾಗುತ್ತದೆ. ಇಂದು ಉದ್ಘಾಟನೆಗೊಂಡ ದಂತದ ಶಿಲ್ಪಕಲೆ ಮತ್ತು ಕಲಾಕೃತಿಗಳ ಅಪೂರ್ವ ಸಂಗ್ರಹದಲ್ಲಿರುವ ಆಕರ್ಷಕ ವಸ್ತುಗಳ ದಾಖಲೀಕರಣ ನಡೆಯುತ್ತಿದೆ. ವಿಶೇಷವಾಗಿ ಪಾಂಡಿಚೇರಿ, ತಮಿಳುನಾಡು ಮೊದಲಾದ ಕಡೆಗಳಲ್ಲಿ ದಂತದ ಬಾಚಣಿಕೆಗೆ, ದಂತದ ಟೂತ್‌ಬ್ರಶ್ ಬಳಸುತ್ತಿದ್ದು ಅಂಥ ವಿಶಿಷ್ಟ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ https://www.vijayavani.net/shree-kshethra-dharmasthala-deeposthava https://www.vijayavani.net/odiyooru-5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net