ಅಲೆಮಾರಿ ಚನ್ನದಾಸರು ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

12-nvl-1 KONARADDI
Published on

ನವಲಗುಂದ: ವಿಧಾನಸಭೆ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸಿ ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಗುರಿ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಭರವಸೆ ನೀಡಿದರು.

ಪಟ್ಟಣದ ಶಿಕ್ಷಕರ ಸಹಕಾರಿ ಕಲ್ಯಾಣ ಕೇಂದ್ರದಲ್ಲಿ ಕರ್ನಾಟಕ ಅಲೆಮಾರಿ ಚನ್ನದಾಸರು ಕ್ಷೇಮಾಭಿವೃದ್ಧಿ ಸಂಘ (ಪ.ಜಾ)(ರಿ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 25 ವರ್ಷಗಳಿಂದ ಅಲೆಮಾರಿ ಜನಾಂಗದ ಸುಮಾರು 25 ಕುಟುಂಬಗಳು ಪಟ್ಟಣದಲ್ಲಿಯೇ ವಾಸಿಸುತ್ತಿದ್ದಾರೆ. ಅವರಿಗೆ ಸೂರಿಲ್ಲದ ಕಾರಣ ಗುಡಿಸಲು ನಿರ್ವಿುಸಿಕೊಂಡು ವಾಸಿಸುತ್ತಿರುವುದು ವಿಷಾದನೀಯ. ಈಗಾಗಲೇ ಸುಮಾರು 8 ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನೀಡಲಾಗಿದೆ. ಆದರೆ, ಇನ್ನುಳಿದ ಜನರು ತಮ್ಮ ಸರಿಯಾದ ದಾಖಲೆಗಳನ್ನು ನೀಡಿದ ಮರು ದಿನವೇ ಅವರಿಗೆ ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಗೋಟಗೊಡಿ ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ. ಭಾಸ್ಕರ ಮಾತನಾಡಿ, ಚನ್ನದಾಸರ ವೃತ್ತಿ ಬಣ್ಣ ಬಳಿದುಕೊಂಡು ಜನಪದವನ್ನು ಎತ್ತಿಹಿಡಿದ ಸಮುದಾಯವಾಗಿದೆ. ಸ್ವಾತಂತ್ರ್ಯ ದೊರಕಿ 77 ವರ್ಷ ಕಳೆದರೂ ಇಂತಹ ಕಲಾವಿದರಿಗೆ ಸೂರಿಲ್ಲ ಎನ್ನುವುದು ದುರಂತ ಎಂದರು.

ಬ್ಯಾಹಟ್ಟಿ ಪಂಚಗೃಹ ಹಿರೇಮಠದ ಮರುಳಸಿದ್ದಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು, ಸಂಶೋಧನಾಧಿಕಾರಿ ಮಲ್ಲಿಕಾರ್ಜುನ ಮಾನ್ಪಡೆ, ಶಿವಾನಂದ ಮುತ್ತಣ್ಣವರ, ಇತರರು ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ರೆಹಮಾನ್​ಸಾಬ್ ಧಾರವಾಡ, ಈರಣ್ಣ ಶಿಡಗಂಟಿ, ರಾಜು ನಿಡವಣಿ, ಹಿರೇಹನಮಂತಪ್ಪ ಹುಳ್ಳಿ, ಕೋಟೇಶ ಲದ್ದಲ್, ಮಾರುತಿ ಅಮಲಚಟ್ಟಿ, ಫಕೀರಪ್ಪ ಮೇಟ್ರಿ, ಮಾರೆಪ್ಪ ಪಸಲಟ್ಟಿ, ಪಕ್ಕಿರಪ್ಪ ಕುಂದ್ರೊಲ, ರಮೇಶ ಗಬ್ಬೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net