ಸಹಕಾರ ಸಂಘದಲ್ಲಿ ರಾಜಕೀಯ ಬೇಡ

mkg1b
Published on

ಹೊನ್ನಾಳಿ: ಸಹಕಾರ ಸಂಘಗಳಲ್ಲಿ ರಾಜಕೀಯ ಪ್ರವೇಶದಿಂದಾಗಿ ಇಂದು ಹಲವು ಸಂಘಗಳು ನಶಿಸಿವೆ. ಆದ್ದರಿಂದ ರಾಜಕೀಯ ಪ್ರವೇಶ ಆಗದಂತೆ ನೋಡಿಕೊಳ್ಳಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ತಾಲೂಕಿನ ಅರಕೆರೆ ಕೃಷಿ ಪತ್ತಿನ ನೂತನ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಶುಕ್ರವಾರ ಮಾತನಾಡಿದರು.

ಸಂಘದ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರಿಗೂ ಸುಲಭವಾಗಿ ಸಾಲ ಸೌಲಭ್ಯ ಕೊಡುವ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡು ನಡೆದರೆ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ ಮಾತನಾಡಿ, ಈ ಸಂಘ ಮೊದಲು ಡಿಸಿಸಿ ಬ್ಯಾಂಕ್‌ನ ಸದಸ್ಯತ್ವ ಪಡೆದುಕೊಳ್ಳಬೇಕು. ಅನಂತರ ಎಲ್ಲ ಸದಸ್ಯರ ಎನ್‌ಸಿಲ್ (5 ವರ್ಷಕ್ಕೆ ಸದಸ್ಯವಾರು ಎಷ್ಟು ಸಾಲ ಬೇಕಾಗುತ್ತೆ ಎನ್ನುವ ಮಾಹಿತಿ ) ಮಾಡಿಸಿ ಕಳಿಸಿಕೊಡಿ. ಅನಂತರ ನಾವು ಹಣಕಾಸಿನ ಲಭ್ಯತೆ ನೋಡಿಕೊಂಡು ಸೌಲ ಸೌಲಭ್ಯ ನೀಡುತ್ತೇವೆ ಎಂದರು.

ಶಿಮುಲ್ ನಿರ್ದೇಶಕ ಬಿ.ಜಿ. ಬಸವರಾಜಪ್ಪ, ಸಂಘದ ನೂತನ ಅಧ್ಯಕ್ಷ ಮನುಗೌಡ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಎನ್.ಟಿ. ಮಂಜುನಾಥ್, ನಿರ್ದೇಶಕರಾದ ಕೆ.ಜಿ. ಮಲ್ಲಿಕಾರ್ಜುನಪ್ಪ, ಬಿ.ಎಸ್. ರುದ್ರಪ್ಪ, ಡಿ. ಬಸವರಾಜಪ್ಪ, ಡಿ.ವಿ. ತಿಮ್ಮಪ್ಪ, ಎನ್.ಬಿ. ನರಸಿಂಹಪ್ಪ, ಎಸ್. ಬಸವರಾಜಪ್ಪ, ಎಂ. ಹನುಮಂತಪ್ಪ, ಗಿಡ್ಡಹಾಲಪ್ಪ, ಸರ್ವಮ್ಮ, ಜಿ.ಬಿ. ಕಮಲಮ್ಮ ಮತ್ತಿತರರಿದ್ದರು.
ಇನ್ನು ಮುಂದೆ ಸನ್ಮಾನ ಮಾಡಬೇಡಿ: ಇಡೀ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸುತ್ತಿದೆ.ಆದ್ದರಿಂದ ಇನ್ಮುಂದೆ ಯಾವುದೇ ಸಭೆ ಸಮಾರಂಭಗಳಲ್ಲಿ ನನಗೆ ಹಾರ ತುರಾಯಿ ಹಾಕಿ ಸನ್ಮಾನ ಮಾಡುವುದು ಬೇಡ ಎಂದು ಶಾಸಕ ಶಾಂತನಗೌಡ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net