ಶುಕ್ರವಾರ ಅಭಿನಯ ತರಬೇತಿ ಶಿಬಿರ ಉದ್ಘಾಟನೆ

Drama 6x4
Published on

ಮೈಸೂರು: ಅದಮ್ಯ ರಂಗ ಶಾಲೆ ವತಿಯಿಂದ ಹವ್ಯಾಸಿ ಕಲಾವಿದರಿಗೆ ಆಯೋಜಿಸುತ್ತಿರುವ 30 ದಿನಗಳ ಅಭಿನಯ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ಮಾ.3ರಂದು ಸಂಜೆ 6 ಗಂಟೆಗೆ ಜಯಲಕ್ಷ್ಮೀಪುರಂನ ವಿವೇಕಾನಂದ ಪದವಿಪೂರ್ವ ಕಾಲೇಜು ಆವರಣದ ಶ್ರೀ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಶಿಬಿರಕ್ಕೆ ಚಾಲನೆ ನೀಡಿಲಿದ್ದಾರೆ. ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಅಧ್ಯಕ್ಷತೆ ವಹಿಸಲಿದ್ದು, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ವಿಜ್ಞಾನ ಲೇಖಕ ಸಾತನೂರು ದೇವರಾಜ್ ಭಾಗವಹಿಸಲಿದ್ದಾರೆ.

ಇದೇ ಸಂದರ್ಭ ಪ್ರತಿಷ್ಠಿತ ಪಂಪ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅವರನ್ನು ಅಭಿನಂದಿಸಲಾಗುತ್ತದೆ. ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಜತೆ ಶಿಬಿರಾರ್ಥಿಗಳು ಸಂವಾದ ನಡೆಸಲಿದ್ದಾರೆ ಎಂದು ಅದಮ್ಯ ರಂಗಶಾಲೆ ಕಾರ್ಯದರ್ಶಿ ಚಂದ್ರು ಮಂಡ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net