೨ ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಲ್ಯಾಬ್ ಲೋಕಾರ್ಪಣೆ

30 ckm 3
ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು ೨ ಕೋಟಿ ರೂ ವೆಚ್ಚದ ಸುಸಜ್ಜಿತವಾದ ಎಲ್ಲ ಸೌಕರ್ಯವುಳ್ಳ ನೂತನ ಲ್ಯಾಬೋರೇಟರಿಯನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಡಾ.ಮೋಹನ್‌ಕುಮಾರ್, ಡಾ.ಹರೀಶ್, ಡಾ.ಅಶ್ವಥ್‌ಬಾಬು, ಡಾ.ಪರಮೇಶ್, ಡಾ.ಕಲ್ಪನಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಳ್ಳಲು ಕೆಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಇರಬೇಕೆಂಬ ದೃಷ್ಟಿಯಿಂದ ಜಿಲ್ಲಾ ಸರ್ಜನ್ ಮೋಹನ್ ಕುಮಾರ್ ಅವರ ಸಾಮಾಜಿಕ ಕಾಳಜಿಯಿಂದಾಗಿ ಹೊಸ ಲ್ಯಾಬ್ ಆರಂಭಿಸಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಮಲ್ಲೇಗೌಡ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು ೨ ಕೋಟಿ ರೂ ವೆಚ್ಚದ ಸುಸಜ್ಜಿತವಾದ ಎಲ್ಲ ಸೌಕರ್ಯವುಳ್ಳ ನೂತನ ಲ್ಯಾಬೋರೇಟರಿ ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆ ವಿಶ್ವ ಆರೋಗ್ಯ ಕ್ಯಾನ್ಸರ್ ಆಸ್ಪತ್ರೆಯಿಂದ ಪ್ರತೀ ಎರಡನೇ ಬುಧವಾರ ಹಾಗೂ ನಾಲ್ಕನೇ ಬುಧವಾರ ಮಲ್ಲೇಗೌಡ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ನಗರದ ನಾಗರೀಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ರಕ್ತ ತಪಾಸಣೆಗೆ ಬಂದಾಗ ಒಂದು ಅಥವಾ ಎರಡನ್ನು ಮಾತ್ರ ಮಾಡಿ ಉಳಿದ ತಪಾಸಣೆಗಳಿಗೆ ಹೊರಗಿನ ಲ್ಯಾಬ್‌ಗಳಿಗೆ ಹೋಗುವಂತ ಪರಿಸ್ಥಿತಿ ಇತ್ತು. ಇಂದು ನೂತನ ಲ್ಯಾಬೋರೇಟರಿ ಆರಂಭವಾಗಿರುವುದರಿAದ ಬಹುತೇಕ ಯಾವುದೇ ರಕ್ತದ ಮಾದರಿಯ ತಪಾಸಣೆ ಇಲ್ಲಿ ಲಭ್ಯವಾಗಲಿದೆ. ಕೇವಲ ಒಂದು ಗಂಟೆಯಲ್ಲಿ ವರದಿ ನೀಡುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ಸ್ವಯA ಚಾಲಿತ ಜೈವಿಕ, ರಾಸಾಯನಿಕ, ಮಿಟಾಲಜಿ ವಿಶ್ಲೇಷಕವನ್ನು ಇಂದಿನಿAದ ಆರಂಭಿಸಿದ್ದು, ಸ್ವಯಂ ಚಾಲಿತ ಎಂಕಾಲಜಿ ಏಳು ಭಾಗ ಇಎಸ್‌ಆರ್ ಪತ್ತೆ ಮಾಡಲು ರೆಟೆಕ್ಟ್ ಪರಿಚಯಿಸಲಾಗಿದೆ. ಥೈರಾಯಿಡ್, ಸಿಎಸ್‌ಆರ್, ಎಸ್‌ಜಿ, ಸಿಎ೧೨೫, ಸಿಎ೧೯ ಮುಂತಾದ ವಿಶೇಷ ಪರೀಕ್ಷೆ ಮಾಡುವಂತಹ ಸಂಪೂರ್ಣ ಸ್ವಯಂ ಚಾಲಿತ ಹಾರ್ಮೋನ್ ವಿಶ್ಲೇಷಕವನ್ನು ಪ್ರಾರಂಭ ಮಾಡಲಾಗಿದೆ. ಈ ಎಲ್ಲಾ ವ್ಯವಸ್ಥೆಗಳು ಇದ್ದರೂ ಯಾರಿಗೂ ಯಾವುದೇ ರೀತಿಯ ದೊಡ್ಡ ಕಾಯಿಲೆ ಬರಬಾರದು ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಈಗಾಗಲೇ ಮೆಡಿಕಲ್ ಕಾಲೇಜಿನಲ್ಲಿ ಹಾಲಿ ೮೬ ಜನ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಯಾವುದೇ ರೀತಿಯ ವೈದ್ಯರ ಕೊರತೆ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಕಾಯಿಲೆಗಳಿಗೂ ವಿಶೇಷ ವೈದ್ಯರಿದ್ದಾರೆ ಎಂದರು.
ಮಲ್ಲೇಗೌಡ ಸರ್ಕಾರಿ ಅಸ್ಪತ್ರೆಯಲ್ಲಿ ಒಳ ಮತ್ತು ಹೊರ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಅದೇ ರೀತಿ ಮಂಗಳೂರು, ಹಾಸನಕ್ಕೆ ಹೋಗುವವರ ಸಂಖ್ಯೆ ಹೆಚ್ಚಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಎಲ್ಲ ಸೌಲಭ್ಯಗಳು ಜಿಲ್ಲಾಸ್ಪತ್ರೆಯಲ್ಲಿಯೇ ದೊರೆಯುತ್ತಿವೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆ ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್ ಮಾತನಾಡಿ, ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳ ಅವಶ್ಯಕತೆ ಇತ್ತು. ಅದು ಇಂದು ಈಡೇರಿದೆ. ಬಡವರಿಗೆ ಇದರಿಂದ ಬಹಳ ಉಪಯೋಗವಾಗುತ್ತದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ವೈದ್ಯರ ರಕ್ಷಣೆಗೆ ಸಹಾಯವಾಗಲಿ ಎಂಬ ಕಾರಣದಿಂದ ಹೋಂಗಾರ್ಡ್ಗಳನ್ನು ನೇಮಕ ಮಾಡಿಕೊಂಡಿz್ದೆÃವೆ. ನೂತನ ಲ್ಯಾಬ್‌ಗಳಿಗೆ ರಸ್ತೆ ಮತ್ತು ಓಪಿಡಿ ಬ್ಲಾಕ್ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ಅಧ್ಯಕ್ಷತೆಯನ್ನು ವೈದ್ಯಕೀಯ ವಿಜ್ಞಾನ ಆಸ್ಪತ್ರೆ ಮತ್ತು ಬೋಧಕ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಹರೀಶ್ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ವೈದ್ಯರಾದ ಡಾ. ಪರಮೇಶ್, ಡಾ.ಲೋಹಿತ್, ಡಾ. ಚಂದ್ರಶೇಖರ್ ಸಾಲಿಮಠ್, ಡಾ. ಕಲ್ಪನಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net