

ಬಂಟ್ವಾಳ: ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರಪಂಚದ ಯಾವುದೇ ಮೂಲೆಯ ಮಾಹಿತಿ ಅರಿಯಲು ಸುದ್ದಿವಾಹಿನಿ ಅಗತ್ಯವಿದೆ. ಕೇವಲ ಧನ ಗಳಿಸುವ ಉದ್ದೇಶವಿರದೆ ನೊಂದವರ ಬಾಳಿನಲ್ಲಿ ಬೆಳಕು ಮೂಡಿಸುವ ಕಾರ್ಯ ಮಾಡುತ್ತಿರುವ ಸೂಕ್ತ ವಾಹಿನಿ ಅಭಿವೃದ್ಧಿ ಹೊಂದಲಿ ಎಂದು ಕಣಿಯೂರು ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹೇಳಿದರು.
ಬಿ.ಸಿ.ರೋಡ್‌ನ ಕೈಕಂಬದಲ್ಲಿರುವ ಡಾ.ಜಗದೀಶ್ ರೈ ಆರ್ಕೇಡ್‌ನ 2ನೇ ಮಹಡಿಯಲ್ಲಿ ಸೂಕ್ತ ಮೀಡಿಯಾ ನೆಟ್‌ವರ್ಕ್ ಸಂಸ್ಥೆಯ ಸೂಕ್ತ ನ್ಯೂಸ್ ಕೇಬಲ್ ವಾಹಿನಿಯ ನ್ಯೂಸ್ ಕಚೇರಿ ಹಾಗೂ ಸಭಾಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು. ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ಧರ್ಮಗುರು ವಲೇರಿಯನ್ ಎಸ್.ಡಿಸೋಜ ನ್ಯೂಸ್ ರೂಮ್ ಉದ್ಘಾಟಿಸಿದರು. ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಕುದ್ರೋಳಿ ದೇವಸ್ಥಾನ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಬಂಟ್ವಾಳ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪದಾಧಿಕಾರಿಗಳಾದ ಬಿ.ಎನ್.ಪುಷ್ಪರಾಜ್, ಭಾಸ್ಕರ್ ರೈ ಕಟ್ಟ, ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ರೋಟರಿ ಕ್ಲಬ್ ಪೂರ್ವ ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸಿದ್ದಕಟ್ಟೆ ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಉದ್ಯಮಿ ಸತೀಶ್ ಕುಮಾರ್ ಬಿ.ಸಿ.ರೋಡ್, ಸೂಕ್ತ ಮೀಡಿಯಾ ಪ್ರವರ್ತಕರಾದ ಜಾನ್ ವಿಲ್ಸನ್ ಲೋಬೊ, ಡೊಮಿನಿಕ್ ಲೋಬೊ, ವಯಲೆಟ್ ಲೋಬೊ, ಕೇಬಲ್ ಆಪರೇಟರ್ ಫ್ರಾನ್ಸಿಸ್ ಲೋಬೋ, ವಕೀಲ ರಿಚಾರ್ಡ್ ಡಿಕೋಸ್ತ, ಸೂಕ್ತ ಮೀಡಿಯಾ ನೆಟ್‌ವರ್ಕ್‌ನ ಪಾಲುದಾರ ನೋವೆಲ್ ಡಿಸೋಜ ಮತ್ತಿತರರು ಭಾಗವಹಿಸಿದ್ದರು.
ನವೀನ್ ಕುಮಾರ್ ಪೆರಾರ ಸ್ವಾಗತಿಸಿದರು. ಆಡಳಿತ ನಿರ್ದೇಶಕ ಪ್ರದೀಪ್ ಪೂಜಾರಿ ಸ್ವಾಗತಿಸಿದರು. ವಿಜೆ ಮಧುರಾಜ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀ ರಾಗ್ ಮ್ಯೂಸಿಕ್ಸ್ ಪುತ್ತೂರು ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.