ವಿದ್ಯಾರ್ಥಿ ಬದುಕಿನಲ್ಲಿ ಆತ್ಮವಿಶ್ವಾಸ : ಸುರೇಂದ್ರ ಕುಲಕರ್ಣಿ

leaders
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭದಲ್ಲಿ ವಿಜ್ಞಾನಿ ಸುರೇಂದ್ರ ಕುಲಕರ್ಣಿ ಮಾತನಾಡಿದರು.
Published on

ಗಂಗೊಳ್ಳಿ: ವಿದ್ಯಾರ್ಥಿ ಬದುಕಿನಲ್ಲಿ ಆತ್ಮವಿಶ್ವಾಸ, ಆತ್ಮಗೌರವ, ಶಿಸ್ತು, ಸಂಯಮ ಮತ್ತು ನಾಯಕತ್ವದ ಗುಣ ಅಳವಡಿಸಿಕೊಂಡು ಮಾದರಿಯಾಗಿ ಮುಂದುವರಿಯಬೇಕು ಎಂದು ವಿಜ್ಞಾನಿ ಸುರೇಂದ್ರ ಕುಲಕರ್ಣಿ ಹೇಳಿದರು.

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಬುಧವಾರ 2024-25ನೇ ಸಾಲಿನ ವಿದ್ಯಾರ್ಥಿ ನಾಯಕರ ಪದಗ್ರಹಣ ಮತ್ತು ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ವರದಿಗಾರ ಜಿ.ಯು.ಭಟ್ ಹೊನ್ನಾವರ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಶರಣ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ರಾಧಾಕೃಷ್ಣ ಭಟ್, ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪಪ್ರಾಂಶುಪಾಲ ರಾಮ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪೂರ್ವಿ ಜಗನ್ನಾಥ್ ಸ್ವಾಗತಿಸಿದರು. ಹರ್ಷಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕೃಪಾಲಿ ಎಸ್.ಮೂಲಿಮನಿ ವಂದಿಸಿದರು. ಆಪ್ತ ಸಮಾಲೋಚಕಿ ಪ್ರತೀಕ್ಷಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕಿ ಅಶ್ವಿನಿ ವಿದ್ಯಾರ್ಥಿ ನಾಯಕರ ಪಟ್ಟಿ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net