

ಭಾಲ್ಕಿ: ರೋಟರಿ ಕ್ಲಬ್ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಅದರ ಪದಾಧಿಕಾರಿಗಳು ಸಮಾಜಮುಖಿ ಕಾರ್ಯ ಮಾಡುವುದರೊಂದಿಗೆ ಬಹು ದಿನಗಳಿಂದ ಬೇರೂರಿದ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಬೇಕು ಎಂದು ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ ಹೇಳಿದರು.
ಪಟ್ಟಣದ ಗುರುಕೃಪಾ ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ನಿಂದ ಸೋಮವಾರ ಹಮ್ಮಿಕೊಂಡಿದ್ದ ೨೦೨೪-೨೫ನೇ ಸಾಲಿನ ನೂತನ ರೋಟರಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೌಢ್ಯತೆ, ಕಂದಾಚಾರ ಅಳಿಸಿ ವೈಜ್ಞಾನಿಕ ಮನೋಭಾವನೆ ಬೆಳೆಸಿ, ಅನಕ್ಷರತೆ ಹೋಗಲಾಡಿಸಿ ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕಾಗಿದೆ. ಈ ನಿಟ್ಟಿಯಲ್ಲಿ ರೋಟರಿ ಕ್ಲಬ್ನವರು ವಿಶ್ವದಾದ್ಯಂತ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದ್ದಾರೆ. ಭಾಲ್ಕಿ ರೋಟರಿ ಕ್ಲಬ್ನವರು ಈ ಹಿಂದೆ ಗುಣಾತ್ಮಕ ಮತ್ತು ರಚನಾತ್ಮಕ ಕಾರ್ಯಗಳ ಮೂಲಕ ರಾಜ್ಯ, ರಾಷ್ಟçಮಟ್ಟದಲ್ಲಿ ಗುರುತಿಸಿಕೊಂಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ರೋಟರಿ ಮಾಜಿ ಎಜಿ ಡಾ.ಅಮೀತ ಅಷ್ಟೂರೆ ಕಾರ್ಯಕ್ರಮ ಉದ್ಘಾಟಿಸಿದರು. ನೃಪತುಂಗ ಝೋನ ಮಾಜಿ ಎಜಿ ಝಹೀರ್ ಅನ್ವರ್ ಮುಲ್ತಾನಿ, ಸಹಾಯಕ ಕೃಷಿ ನಿರ್ದೇಶಕ ಪಿ.ಎಂ.ಮಲ್ಲಿಕಾರ್ಜುನ ಮಾತನಾಡಿದರು.
ಅಧಿಕಾರಿ ಡಾ.ವಸಂತ ಪವಾರ್ ಈ ಹಿಂದಿನ ರೋಟರಿ ಅಧ್ಯಕ್ಷ ಡಾ.ವಿಲಾಸ ಕನಸೆ, ಕಾರ್ಯದರ್ಶಿ ಸಾಗರ ನಾಯಕ, ಖಜಾಂಚಿ ಡಾ.ಶಶಿಕಾಂತ ಭೂರೆ ಅವರಿಂದ ನೂತನ ರೋಟರಿ ಅಧ್ಯಕ್ಷ ರೋ.ಸಂಜೀಯಕುಮಾರ ಪಂಡರಗೆರೆ, ಕಾರ್ಯದರ್ಶಿ ರೋ.ದತ್ತುಕುಮಾರ ಮೆಹಕ್ರೆ ಮತ್ತು ಖಜಾಂಚಿ ಡಾ.ಸಜ್ಜಲ ಬಳತೆ ಅವರಿಗೆ ಗೌಪ್ಯತೆ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು.
ಕು.ಸ್ಪೂರ್ವ ಶಾಂತನು, ಕು.ಅನ್ವಿತಾ ಸಾಗರ ಪ್ರಾರ್ಥನೆ ಗೀತೆ ಹಾಡಿದರು. ಕು.ಸನ್ನಿಧಿ ಅಷ್ಟೂರೆ ಮತ್ತು ಕು.ಸಾನವಿ ದೇವಪ್ಪ ವಚನ ಗಾಯನ ಮಾಡಿದರು.
ರೋಟರಿ ಸದಸ್ಯರಾದ ಡಾ.ಯುವರಾಜ ಜಾಧವ್, ಅಶ್ವಿನ್ ಭೋಸ್ಲೆ, ಡಾ.ನಿತೀನ ಪಾಟೀಲ್, ಡಾ.ಶರದ ತುಕದೆ, ನ್ಯಾಯವಾದಿಗಳಾದ ಬಸವಾ ಪಾಟೀಲ್, ಸೌರಭ ನಾಯಕ, ಶಾಂತನು ಕುಲಕರ್ಣಿ, ರೋ. ಅಮರ ಜಲ್ದೆ, ಡಾ.ವಿಕ್ರಮ ದೇವಪ್ಪ, ರೋ.ಶಾಂತವೀರ ಸಿರ್ಗಾಪೂರೆ, ಡಾ.ಧನರಾಜ ಹುಲಸೂರೆ, ರೋ.ಪ್ರಭು ಕೋಟೆ,ನ್ಯಾಯವಾದಿ ಸಂಜಯ ನಾಯಕ, ಡಾ.ಶ್ರೀರಂಗ ಬಿರಾದಾರ, ರೋ.ಮಾನಸಿ ಯಶವಂತರಾವ ಪವಾರ್, ಡಾ.ಗುಂಡೆರಾವ ಶೆಡೋಳೆ, ಡಾ.ಪ್ರಶಾಂತ ಬಿರಾದಾರ, ರೋ.ಅವಿನಾಶ ಮಾಳಗೆ , ಮಾಂಜ್ರಾ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಎಮ್ಮೆ, ಕಾರ್ಯದರ್ಶಿ ಜಗದೀಶ ಖಂಡ್ರೆ ಇತರರಿದ್ದರು.
ಡಾ.ಅನೀಲ ಸುಕಾಲೆ ಸ್ವಾಗತಿಸಿದರು. ನ್ಯಾಯವಾದಿ ಉಮಾಕಾಂತ ವಾರದ ನಿರೂಪಣೆ ಮಾಡಿದರು. ರೋ.ಸೋಮನಾಥ ಮುದ್ದಾ ವಂದಿಸಿದರು.
ರೋಟರಿ ಸರ್ವ ಸದಸ್ಯರ ಸಹಕಾರ, ಪ್ರೋತ್ಸಾಹದಿಂದ ಕೈಲಾದಷ್ಟು ಮಟ್ಟಿಗೆ ನೂತನ ಕಾರ್ಯ ಯೋಜನೆ ಮೂಲಕ ಪೋಲಿಯೋ ನಿರ್ಮೂಲನೆ, ಸಾಕ್ಷರತೆ ಹೆಚ್ಚಳ, ಪರಿಸರ ಜಾಗೃತಿ, ಉಚಿತ ನೇತ್ರ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗುವುದು.
| ಸಂಜಯಕುಮಾರ ಪಂಡರಗೆರೆ ನೂತನ ಅಧ್ಯಕ್ಷ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್